Bengaluru

ಬೆಂಗಳೂರನ್ನು ಹೈದರಾಬಾದ್‌ಗೆ ಹೋಲಿಸುವುದು ಹಾಸ್ಯಾಸ್ಪದ; ಸಿಎಂ ಬೊಮ್ಮಾಯಿ

ಬೆಂಗಳೂರು: ಉದ್ಯಮಗಳನ್ನು ಹೈದರಾಬಾದ್‌ಗೆ ಬರುವಂತೆ ತೆಲಂಗಾಣ ಸಚಿವ ಕೆ.ಟಿ.ರಾಮಾರಾವ್‌ ಆಹ್ವಾನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಬೆಂಗಳೂರು ನಗರವನ್ನು ಹೈದರಾಬಾದ್‌ಗೆ ಹೋಲಿಸುವುದು. ಬೆಂಗಳೂರಿಗಿಂತ ಹೈದರಾಬಾದ್‌ ಮೇಲು ಎನ್ನುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಜಗತ್ತಿನ ಜನರು ಬೆಂಗಳೂರು ನಗರದ ಬಗ್ಗೆ ಆಕರ್ಷಿತರಾಗಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳ ಜನರೂ ಬೆಂಗಳೂರಿಗೆ ಬರುತ್ತಿದ್ದಾರೆ. ಹೆಚ್ಚು ಹೆಚ್ಚು ಉದ್ಯಮಿಗಳು ಕೂಡಾ ಉದ್ಯಮಗಳನ್ನು ಸ್ಥಾಪಿಸಲು ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಅತಿ ಹೆಚ್ಚು ಸ್ಟಾರ್ಟಪ್‌ಗಳು ಕೂಡಾ ಬೆಂಗಳೂರಿನಲ್ಲೇ ಇವೆ. ಹೀಗಾಗಿ ಬೆಂಗಳೂರನ್ನು ಹೈದರಾಬಾದ್‌ಗೆ ಹೋಲಿಸುವುದು ಹಾಸ್ಯಾಸ್ಪದ ಎಂದು ಸಿಎಂ ಬೊಮ್ಮಾಯಿ ಹೇಳಿದರು.

 

Share Post