ಸಾರಿಗೆ ಸಚಿವರ ಮನೆಗೆ ಟ್ಯಾಕ್ಸಿ ಚಾಲಕರ ಮುತ್ತಿಗೆ-ನೂರಾರು ಕಾರುಗಳನ್ನು ನಿಲ್ಲಿಸಿ ಧರಣಿ
ಬೆಂಗಳೂರು: ನಗರದಲ್ಲಿ ರಾಪಿಡೋ ಬೈಕ್‌ಗಳ ಹಾವಳಿ, ಓಲಾ, ಊಬರ್ ದರ ಏರಿಕೆ, ಫೈನಾನ್ಸ್ ಕಂಪನಿಗಳ ಅನಧಿಕೃತ ಬಡ್ಡಿ ವಿಚಾರ ಕುರಿತಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಟ್ಯಾಕ್ಸಿ ಚಾಲಕರು ಧರಣಿ ನಡೆಸಿದ್ದಾರೆ. ಸವೆನ್ ಮಿನಿಸ್ಟರ್ ಕ್ವಾಟ್ರಸ್‌ನಲ್ಲಿರುವ ಸಾರಿಗೆ ಸಚಿವ ಶ್ರೀರಾಮುಲು ಅವರ ನಿವಾಸದ ಎದುರು ಭಾರತ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (Bharath Transport Association) ಮುತ್ತಿಗೆ ಹಾಕಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಜಾಗ ಬಿಟ್ಟು ಹೋಗಲ್ಲ ಎಂದು ಟ್ಯಾಕ್ಸ್ ಚಾಲಕರ ದಾರಿಯುದ್ದಕ್ಕೂ ಕ್ಯಾಬ್ ನಿಲ್ಲಿಸಿ ಪ್ರೊಟೆಸ್ಟ್ ನಡೆಸಿದ್ದಾರೆ.
ಕೂಡಲೇ ಬೈಕ್ ಟ್ಯಾಕ್ಸಿ ಸ್ಕೀಮ್ ಹಿಂಪಡೆಯಿರಿ, ಫೈನಾನ್ಸ್ ಕಂಪನಿಗಳು ವಿಧಿಸಿರುವ ಬಡ್ಡಿ ಹಿಂಪಡೆಯುವಂತೆ, ದರ ಏರಿಕೆ ಮಾಡಿ ಈ ಎಲ್ಲಾ ವಿಚಾರಗಳಿಗೆ ಪರಿಹಾರ ಸಿಗುವವರೆಗೂ ದಾರಿ ಬಿಡಲ್ಲ ಎಂದು ಪಟ್ಟು ಹಿಡಿದ್ರು. ಪೊಲೀಸರು ಕಾರುಗಳನ್ನು ತೆಗೆಯುವಂತೆ ಎಷ್ಟೇ ಮನವಿ ಮಾಡಿದ್ರೂ ಸಚಿವರು ಬಂದು ಸಮಸ್ಯೆ ಆಲಿಸಿ, ಪರಿಹಾರ ನೀಡುವವರೆಗೂ ಇಲ್ಲಿಂದ ಹೋಗಲ್ಲ ಎಂದು ಧರಣಿ ನಡೆಸಿದ್ದಾರೆ.
ಗಡುವು ಕೇಳಿದ ಸಾರಿಗೆ ಸಚಿವ
ಒಂದು ವಾರ ನನಗೆ ಸಮಯ ನೀಡಿ ಅಷ್ಟರಲ್ಲಿ ನಿಮ್ಮ ಸಮಸ್ಯೆಯನ್ನಯ ಪರಿಹಾರ ಮಾಡುತ್ತೇನೆ. ಮುಂದಿನ ಸೋಮವಾರದೊಳಗೆ ಎಲ್ಲಾ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ರ್ಯಾಪಿಡ್ ಬೈಕ್, ಟ್ಯಾಕ್ಸಿ ನಮ್ಮ ಗಮನಕ್ಕೆ ಬಂದಿದೆ. ಸೋಮವಾರ ಎಲ್ಲಾ ಅಧ್ಯಕ್ಷರು, ಕಾನೂನು ಸಲಹೆಗಾರರನ್ನ ಕರೆದು ಮಾತನಾಡುತ್ತೇನೆ. ಯಾವ ಚಾಲಕರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಇದನ್ನೆ ನಂಬಿ ಜೀವನ ಮಾಡುತ್ತಿರುವ ಚಾಲಕರ ಸಮಸ್ಯೆ ಬಗೆಹರಿಸುತ್ತೇನೆ. ನಿರುದ್ಯೋಗಿಗಳು ಜೀವನ ನಡೆಸುವ ಸಲುವಾಗಿನ ಇಂತಹ ಕೆಲಸ ಮಾಡ್ತಿದಾರೆ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ ಎಂದ್ರು.
ಕಾನೂನುಬಾಹಿರವಾಗಿ ಸಂಚಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸೋಮವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ವೈಟ್ ಬೋರ್ಡ್ ನಿಂದ ಅನಾಹುತವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಒಂದು ವಾರ ಸಮಯವಕಾಶ ಕೊಡಿ ಇದರ ಬಗ್ಗೆ ಚರ್ಚೆ ಮಾಡಿ ರದ್ದು ಮಾಡುವ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದರು.