BengaluruPolitics

ಕೆಪಿಟಿಸಿಎಲ್‌ ನೌಕರರ ವೇತನ 20% ಹೆಚ್ಚಳ; ಇಂದೇ ಆದೇಶ

ಮಂಗಳೂರು; ಕೆಪಿಟಿಸಿಎಲ್‌ ನೌಕರರ ವೇತನವನ್ನು ಪರಿಷ್ಕರಿಸಲು ಸರ್ಕಾರ ತೀರ್ಮಾನಿಸಿದೆ. ಮೂಲ ವೇತನದಲ್ಲಿ ಶೇ.೨೦ರಷ್ಟು ಹೆಚ್ಚಳ ಮಾಡಲು ಸಿಎಂ ಒಪ್ಪಿಗೆ ನೀಡಿದ್ದು, ಇಂದು ಸಂಜೆಯೊಳಗೆ ಆದೇಶ ಹೊರಬೀಳಿದೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಮಾಹಿತಿ ಪಡೆದು ಶೇ೨೦ರಷ್ಟು ವೇತನ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ ಎಂದರು.

ಇನ್ನು ಹೊಸ ವೇತನ ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ, ಕೆಪಿಟಿಸಿಎಲ್‌ ನೌಕರರ ವೇತನ ಹೆಚ್ಚಳ ಮಾಡಿ ಇಂದೇ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಸಾರಿಗೆ ನೌಕರರ ವೇತನದಲ್ಲಿ ಶೇ. 15ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆಯೂ ಸಂಜೆಯೊಳಗೆ ಆದೇಶ ಹೊರಡಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

Share Post