National

ಕನ್ನಡಿಗರಿಗೆ ಕನ್ನಡದಲ್ಲಿಯೇ ಹಬ್ಬದ ಶುಭ ಕೋರಿದ ಮೋದಿ

ನವದೆಹಲಿ : 25 ಲೋಕಸಭಾ ಸದಸ್ಯರನ್ನು ಕೊಟ್ಟ ಕರ್ನಾಟಕಕ್ಕೆ ಮೋದಿ ಸಂಕ್ರಾಂತಿಯ ಶುಭಾಷಯ ಕೋರಿದ್ದಾರೆ. ತಮ್ಮ ಟ್ವಿಟ್ಟರ್‌ ಖಾತೆಯಿಂದ ಕನ್ನಡದಲ್ಲಿಯೇ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿದ್ದಾರೆ ಪ್ರಧಾನಿ ಮೋದಿ.

ಬಸವರಾಜ್‌ ಬೊಮ್ಮಾಯಿ ಅವರು ಪ್ರಧಾನಿ ಮೋದಿಗೆ ಸಂಕ್ರಾಂತಿಯ ಶುಭಾಷಯ ತಿಳಿಸಿದ್ದರು. ಆ ಟ್ವೀಟ್‌ ಜೊತೆಗೆ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ

ರಾಷ್ಟ್ರದ ಪ್ರಗತಿಗೆ ಅಭೂತಪೂರ್ವ ಕೊಡುಗೆ ನೀಡುತ್ತಿರುವ ಕರ್ನಾಟಕದ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ರಾಜ್ಯದ ಜನರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾ ಶ್ರಮಿಸಲಿವೆ.

Share Post