National

ಹಿಮದಲ್ಲಿ ವಾಲಿಬಾಲ್‌ ಆಟವಾಡಿ ಸಂತಸಪಟ್ಟ ಯೋಧರು

ಸಾಮಾನ್ಯವಾಗಿ ತುಸು ಚಳಿ, ಮಳೆ ಬಂದ್ರೆ ಹೊರಗಡೆ ಓಡಾಡದೆ ಮನೆಯಲ್ಲೇ ಬೆಚ್ಚಗೆ ಚಹಾ..ಬಜ್ಜಿ ಸೇವಿಸುತ್ತಾ ಕೂರುವ ನಾವು ಆಟ ಆಡುವುದುಂಟೇ ಅದು ವಾಲಿಬಾಲ್‌ನಂತಹ ಆಟಗಳು..ಅಬ್ಬಾ ಹೇಳೋದಲ್ಲ ಊಹೆ ಮಾಡಿಕೊಳ್ಳುವುದಕ್ಕೂ ಕಷ್ಟ. ಆದ್ರೆ ನಮ್ಮ ಸೈನಿಕರು ಮಾತ್ರ ಚಳಿ, ಮಳೆ, ಗಾಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ಗಡಿ ಕಾಯ್ತಾರೆ. ಭಾರೀ ಹಿಮಪಾತದ ನಡುವೆಯೂ ತಮ್ಮ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ. ಇದರ ನಡುವೆ ನಮ್ಮ ಯೋಧರಿಗೆ ಹಬ್ಬ-ಹರಿದಿನ ಇದ್ಯಾವುದೂ ಗೊತ್ತೇ ಇರಲ್ಲ. ಇನ್ನೂ ತಮ್ಮ ಮನೆ, ನೆಂಟರು ನಿಷ್ಟರು ಇದ್ಯಾವುದರ ಪರಿವೇ ಇಲ್ಲದಂತೆ ಬದುಕಬೇಕು. ಇವೆಲ್ಲದರ ನಡುವೆ ಅಲ್ಲಿರುವ ತಮ್ಮ ಜೊತೆಗಾರರನ್ನೇ ಕುಟುಂಬ, ಸ್ನೇಹಿತ, ಅಣ್ಣ-ತಮ್ಮ ಎಂದುಕೊಂಡು ಬದುಕು ಸಾಗಿಸುತ್ತಾರೆ. ಅವರು ಏನೇ ಸಂಭ್ರಮ ಸಡಗರ ಆದ್ರೂ ಅವರೊಟ್ಟಿಗೇ ಹಂಚಿಕೊಳ್ಳಬೇಕು ಅಂತದ್ದೇ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓರ್ವ  ಐಎಎಸ್‌ ಅಧಿಕಾರಿಯಬ್ಬರು ಶೇರ್‌ ಮಾಡಿದ್ದಾರೆ.

ಉತ್ತರ ಭಾರತದ ಭಾಗದಲ್ಲಿ ಬೀಳುತ್ತಿರುವ ಭಾರೀ ಹಿಮಪಾತದ ನಡುವೆಯೂ ಭಾರತೀಯ ಯೋಧರು ವಾಲಿಬಾಲ್‌ ಆಡಿ ಸಂಭ್ರಮಿಸಿದ್ದಾರೆ.  ೀ ವಿಡಿಯೋವನ್ನು ಐಎಎಸ್‌ ಅಧಿಕಾರಿ ಅವನೀಶ್‌ ಶರಣ್‌ ಎಂಬುವವರು The best winter games ಎಂಬ ಹ್ಯಾಶ್‌ ಟ್ಯಾಗ್‌ನಡಿ ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ. ದಟ್ಟ ಹಿಮಪಾತದಲ್ಲಿ ಯೋಧರು ಎರಡು ತಂಡಗಳಾಗಿ  ಬೇರ್ಪಟ್ಟು ಆಡವಾಡಿ ಸಂಭ್ರಮಿಸುತ್ತರುವ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿವರೆಗೂ ಹದಿನಾಲ್ಕು ಸಾವಿರ ಲೈಕ್ಸ್‌ ಪಡೆದಿದ್ದು. ಇಂದು ಲಕ್ಷದ ಮೂವತ್ತು ಸಾವಿರ ಜನ ವೀಕ್ಷಿಸಿದ್ದಾರೆ.  ಬೆಳಗ್ಗೆ ಚಳಿಗೆ ಹೆದರಿ ಮನೆಯಿಂದ ಹೊರಬರದೆ ಕೂರುವ ನಾವು,  ನಮ್ಮ ಯೋಧರ ಈ ಸಾಹಸಕ್ಕೆ ಸಾಕಷ್ಟು ಮೆಚ್ಚುಗೆ ದುರೆತಿದೆ.

Share Post