Sports

Ind vs Sa Test :ವಿವಾದ ಸೃಷ್ಠಿಸಿದ DRS – ವಿರಾಟ್‌, ಅಶ್ವಿನ್‌ ಅಸಮಾಧಾನ

ಕೇಪ್‌ಟೌನ್‌ : ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್‌ ಪಂದ್ಯ ಸಾಕಷ್ಟು ವಿಷಯಕ್ಕೆ ಗಮನ ಸೆಳೆದಿದೆ. ಭಾರತ ಎರಡನೇ ಇನ್ನಿಂಗ್ಸ್‌ ಬಳಿಕ ದ.ಆಫ್ರಿಕಾಗೆ 211 ರನ್‌ಗಳ ಗುರಿ ನೀಡಿತು.

ರನ್‌ ಚೇಸಿಂಗ್‌ ಮಾಡುತ್ತಿದ್ದ ದ.ಆಫ್ರಿಕಾ ಒಂದು ವಿಕೆಟ್‌ ಕಳೆದುಕೊಂಡು 60 ರನ್‌ ಗಳಿಸಿ ಆಡುವಾಗ, ಅಶ್ವಿನ್‌ ಅವರ ಎಸೆತವೊಂದು ಬ್ಯಾಟ್ಸ್‌ಮನ್‌ ಡೀನ್‌ ಎಲ್ಗರ್‌ ಅವರ ಬ್ಯಾಟಿಗೆ ತಾಗದೆ ನೇರವಾಗಿ ಪ್ಯಾಡ್‌ಗೆ ಬಿತ್ತು. ವಿಶ್ವಾಸದಿಂದ ಟೀಮ್‌ ಇಂಡಿಯಾ ಅಪೀಲ್‌ ಮಾಡಿತು.

ಅಪೀಲ್‌ ಅನ್ನು ಅಂಗೀಕರಿಸಿದ ಫೀಲ್ಡ್‌ ಅಂಪೈರ್‌ ಡೀನ್‌ ಎಲ್ಗರ್‌ ಔಟ್‌ ಎಂದು ಘೋಷಿಸಿದರು. ಆದರೆ ಡೀನ್‌ ಎಲ್ಗರ್‌ DrS ತೆಗೆದುಕೊಂಡರು.

DRS ರಿಸಲ್ಟ್‌ ನಿಜಕ್ಕೂ ಅಚ್ಚರಿ ತಂದಿತ್ತು. 3ಡಿ ಸ್ಪಿನ್‌ ವಿಷನ್‌ ತಂತ್ರಜ್ಞಾನದಲ್ಲಿ ಚೆಂಡು ವಿಕೆಟ್‌ಗೆ ಬಡಿಯದೇ ಮೇಲೆ ಹೋಗುತ್ತಿದೆ ಎಂದು ತೋರಿಸಿತು. ಟೀಂ ಇಂಡಿಯಾ ನಿಜಕ್ಕೂ ಶಾಖ್‌ ಆಗಿತ್ತು. ವಿರಾಟ್‌ ಕೊಹ್ಲಿ ಕಾಲನ್ನು ನೆಲಕ್ಕೆ ಚಿಮ್ಮುವ ಮೂಲಕ ಅಸಮಾಧಾನ ಹೊರಹಾಕಿದರು.

ಡೀನ್‌ ಎಲ್ಗರ್‌ ಅವರ ಮಂಡಿಗಿಂತಲೂ ಕೆಳಗೆ ಬಡಿದ ಚಂಡು ಯಾವುದೇ ಕಾರಣಕ್ಕೂ ವಿಕೆಟ್‌ ಮಿಸ್‌ ಆಗದೇ ಇರದು ಎಂಬುದು ಟೀಮ್‌ ಇಂಡಿಯಾದ ಲೆಕ್ಕಾಚಾರ.

ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ, ರವಿಚಂದ್ರನ್‌ ಅಶ್ವಿನ್‌, ಕೆ ಎಲ್‌ ರಾಹುಲ್‌ ಎಲ್ಲರೂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗ ಈ ಒಂದು ಡಿ.ಆರ್‌.ಎಸ್‌ ತೀರ್ಪು ಸಾಕಷ್ಟು ವಿವಾದ ಸೃಷ್ಠಿಸಿದೆ. ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Share Post