ಹೊಟೇಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅನುಮತಿ ನೀಡಿದ ಡಿಡಿಎಂಎ
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸ್ಫೋಟ ಹೆಚ್ಚಾದ ಹಿನ್ನೆಲೆಯಲ್ಲಿ ಹೊಟೇಲ್ ಮತ್ತು ರೆಸ್ಟೋರೆಂಟ್ಗಳಿಗೆ ನೀಡಿದ್ದ 50-50 ಆಸನದ ವ್ಯವಸ್ಥೆಯನ್ನು ರದ್ದು ಮಾಡಿ, ಪಾರ್ಸೆಲ್ಗಳಿಗಷ್ಟೇ ಅನುಮತಿ ನೀಡಿರುವುದಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ (ಡಿಡಿಎಂಎ).
ದೆಹಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಡಿಡಿಎಂಎ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟೇಕ್ ಅವೇ ಮಾತ್ರ ಅನುಮತಿ ನೀಡಿದ್ದಾರೆ. ಸದ್ಯಕ್ಕೆ ಲಾಕ್ಡೌನ್ ಬಗ್ಗೆ ತೀರ್ಮಾನ ಮಾಡಿಲ್ಲ. ಆದ್ರೆ ಯಾವುದೇ ಹೊಟೇಲ್ಗಳಲ್ಲಿ ಡೈನ್ ಇನ್ಗೆ ಅನುಮತಿ ನೀಡದಂತೆ ತಾಕೀತು ಮಾಡಿದ್ದಾರೆ. ಜೊತೆಗೆ ಮೆಟ್ರೋ ಮತ್ತು ಬಸ್ಗಳಲ್ಲಿ ಆಸನದ ಅನುಗುಣವಾಗಿ ಜನರ ಸಂಖ್ಯೆಯನ್ನು ಕಡಿಮೆಗೊಳಿಸಲು ತೀರ್ಮಾನ ಮಾಡಲಾಗಿದೆ.
DDMA decides to close restaurants, only take away facility allowed: Delhi LG Anil Baijal
— Press Trust of India (@PTI_News) January 10, 2022
ದೆಹಲಿಯಲ್ಲಿ ಇಂದು 19,166 ಹೊಸ ಸೋಂಕಿನ ಪ್ರಕರಣಗಳು ಮತ್ತು 17 ಕೊವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇಕಡಾ 25 ರಷ್ಟಿದೆ, ದೆಹಲಿಯಲ್ಲಿ ಪ್ರಸ್ತುತ 60,733 ಸಕ್ರಿಯ ಸೋಂಕಿನ ಪ್ರಕರಣಗಳು ದಾಖಲಾಗಿವೆ.
ಆತಂಕಕಾರಿ ವಿಚಾರ ಅಂದ್ರೆ ಇಂದು ಸುಮಾರು “ಸಾವಿರ ಪೊಲೀಸ್ ಸಿಬ್ಬಂದಿ” ಕೊವಿಡ್ -19 ಪಾಸಿಟಿವ್ ವರದಿಯಾಗಿರುವುದು ಎಂದು ತಿಳಿಸಿದ್ದಾರೆ. ಸದ್ಯ ಎಲ್ಲಾ ಪೊಲೀಸರನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ.