Politics

ಮೇಕೆದಾಟು ಪಾದಯಾತ್ರೆ : ಡಿಕೆಶಿ , ಸಿದ್ದು ಸೇರಿ 30 ಜನರ ಮೇಲೆ FIR

ರಾಮನಗರ : ಮೇಕೆದಾಟು ಪಾದಯಾತ್ರೆಯ ಮೂಲಕ ಹೋರಾಟಕ್ಕಿಳಿದಿದ್ದ ಡಿಕೆಶಿ, ಸಿದ್ದು ನೇತೃತ್ವದ ಕಾಂಗ್ರೆಸ್‌ ಪಕ್ಷದವರ ವಿರುದ್ಧ ಸರ್ಕಾರ  FIR ದಾಖಲಿಸಿದೆ. 2005ರ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ಕನಕಪುರ ತಾಲ್ಲೂಕಿನ ಸಾತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 30 ಪ್ರಮುಖ ನಾಯಕರ ವಿರುದ್ಧ ಕೇಸ್‌ ದಾಖಲಿಸಲಾಗಿದೆ

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ ವಿಧಿಸಿತ್ತು. ಆದರೆ ಇದು ರಾಜಕೀಯ ಹುನ್ನಾರ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕಾಂಗ್ರೆಸ್‌ ಹೇಳಿತ್ತು. ನಿಯಮ ಉಲ್ಲಂಘಿಸಿದರೆ ನಾವು ಕೇಸ್‌ ದಾಖಲಿಸುತ್ತೇವೆ ಎಂದು ಸರ್ಕಾರ ಖಡಕ್‌ ಸೂಚನೆ ನೀಡಿತ್ತು. ಈಗ ಅದರಂತೆಯೇ ಕಂಗ್ರೆಸ್‌ ನಾಯಕರಿಗೆ ಸರ್ಕಾರ ಶಾಕ್‌ ನೀಡಿದೆ.

ಸರ್ಕಾರದ ವಿರುದ್ಧ ಡಿಕೆಶಿ ಗರಂ 

FIR ಸಂಬಂಧ ಪಟ್ಟಂತೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್‌ ಗುಡುಗಿದ್ದಾರೆ. ಕೋವಿಡ್‌ ಹೆಸರಲ್ಲಿ ಜನರನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ. ಕೋವಿಡ್‌. ಸಾವಿರಾರು ಕೋಟಿ ಲೂಟಿ ಮಾಡಿದೆ ಈ ಸರ್ಕಾರ. 10000 ಬೆಡ್‌ ಏನಾಯ್ತು ? ಒಬ್ಬರಾದರೂ ಅಲ್ಲಿ ಹೋಗಿ ಮಲಗಿದ್ದಾರಾ ? ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಇನ್ನು FIR ಆಗಿರೋದರ ಬಗ್ಗೆ ನನಗೆ ತಿಳಿದಿಲ್ಲ, ಕೇವಲ 30 ಜನರ ಮೇಲೆ ಏಕೆ FIR ಹಾಕಿದ್ದಾರೆ, ನಾವು ಸಾವಿರಾರು ಮಂದಿ ಇದ್ದೀವಿಲ್ಲ ಎಂದು ಮಾಧ್ಯಮ ಮಿತ್ರರಿಗೆ ಮರು ಪ್ರಶ್ನೆ ಹಾಕಿದ್ದಾರೆ.

 

 

Share Post