ಸಾಹಿತಿ, ನಾಟಕಕಾರ ʼಚಂದ್ರಶೇಖರ ಪಾಟೀಲʼ ನಿಧನ
ಬೆಂಗಳೂರು : ಸಾಹಿತ್ಯ ಲೋಕದಲ್ಲಿ ಚಂಪಾ ಎಂದೇ ಖ್ಯಾತಿಗಳಿಸಿದ್ದ ಚಂದ್ರಶೇಖರ ಪಾಟೀಲ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. 1939ರ ಜೂನ್ 18ರಂದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಜನಿಸಿದ್ದರು. 15 ವರ್ಷಗಳ ಹಿಂದೆ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಚಂಪಾ.
ಕನ್ನಡ ನಾಡಿನ ಸಾಹಿತ್ಯ, ಭಾಷಾ ಚಳುವಳಿಗಳಲ್ಲಿ ಚಂಪಾ ಸದಾ ಮುಂದೆ ಇರುತ್ತಿದ್ದರು. ನಗರದ ಕೋಣನಕುಂಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಇಂದು ಮುಂಜಾನೆ ಕೊನೆಯುಸಿರೆಳೆದರು. ಯಲಚೇನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ಶಿಫ್ಟ್ ಮಾಡಲಾಗುವುದು ಎಂದು ವರದಿಯಾಗಿದೆ.
ಅಂತ್ಯಕ್ರಿಯೆ ಎಲ್ಲಿ ನಡೆಸುವುದು ಎಂಬುದರ ಬಗ್ಗೆ ಇನ್ನು ಚರ್ಚೆ ನಡೆದಿದೆ. ಬೆಂಗಳೂರು ಅಥವಾ ಹಾವೇರಿಯ ಡೊಂಬರಮತ್ತೂರಿನಲ್ಲಿ ನಡೆಸುವುದರ ಬಗ್ಗೆ ಚಿಂತಿಸಲಾಗ್ತಿದೆ. ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಿದೆ ಕುಟುಂಬ.
ಚಂಪಾ ಅವರ ಸಾವಿಗೆ ಸಂತಾಪ ಸೂಚಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮೂಖ್ಯಮಂತ್ರಿ ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ಇನ್ನಿತರ ಗಣ್ಯರುಗಳು ಟ್ವೀಟ್ ಮಾಡಿದ್ದಾರೆ
ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ (ಚಂಪಾ) ಅವರು ನಿಧನರಾದ ವಿಷಯದಿಂದ ತುಂಭಾ ದುಃಖಿತನಾಗಿದ್ದೇನೆ.
ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನವರಾದ ಚಂಪಾ ಅವರು ಒಬ್ಬ ಕ್ರಾಂತಿಕಾರಿ ಸಾಹಿತಿ. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರ.
1/3 pic.twitter.com/MahFYOn3Aq— Basavaraj S Bommai (@BSBommai) January 10, 2022
ಕನ್ನಡಪರ ಹೋರಾಟಗಾರ, ಕವಿ, ನಾಟಕಕಾರ, ಸಂಘಟನಕಾರ, ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ ಪಾಟೀಲ ಅವರ ನಿಧನ ಬಹಳ ದುಃಖ ಉಂಟು ಮಾಡಿದೆ. 1/2 pic.twitter.com/VRDbCvGdJE
— H D Kumaraswamy (@hd_kumaraswamy) January 10, 2022