Politics

ಮೇಕೆದಾಟು ಪಾದಯಾತ್ರೆ 2ನೇ ದಿನ : ಡಿಕೆಶಿಯಿಂದ ದೊಡ್ಡ ಆಲನಹಳ್ಳಿಯಲ್ಲಿ ಪೂಜೆ

ರಾಮನಗರ : ಮೇಕೆದಾಟು ಪಾದಯಾತ್ರೆಯನ್ನು ಕೈಗೊಂಡಿರುವ ಕೈ ನಾಯಕರ ಜನಾಂದೋಲನ ಕಾರ್ಯಕ್ರಮಕ್ಕೆ ಇಂದು ಎರಡನೇ ದಿನ. ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್‌ ನಾಯಕರಿಂದ ಮತ್ತು ಸಿನಿಮಾ ಕ್ಷೇತ್ರದವರಿಂದ ಉತ್ತಮ ರೆಸ್ಪಾನ್ಸ್‌ ಕೂಡ ಸಿಕ್ಕಿದೆ.

ಎರಡನೇ ದಿನವಾದ ಇಂದು ಡಿಕೆ ಶಿವಕುಮಾರ್‌ ಅವರು ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಶುರುಮಾಡಲಿದ್ದಾರೆ. ಇಂದು ಮಧ್ಯಾಹ್ನದ ಹೊತ್ತಿಗೆ ಮಾದಪ್ಪನದೊಡ್ಡಿ ತಲುಪುತ್ತಾರೆ. ಮಾದಪ್ಪನದೊಡ್ಡಿ ಮತ್ತು ಕರಿಯಪ್ಪನದೊಡ್ಡಿಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಾಯಂಕಾಲದ ಹೊತ್ತಿಗೆ ಕನಕಪುರ ನಗರ ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಇಂದು ಒಟ್ಟು 16 ಕಿಲೋಮೀಟರ್‌ ಪಾದಯಾತ್ರೆ ನಡೆಸಲಿದ್ದಾರೆ ಕೈ ನಾಯಕರು. ಬೇರೆ ಬೇರೆ ಜಿಲ್ಲೆಗಳಿಂದ ಜನರು ಭಾಗಿಯಾಗುತ್ತಿದ್ದು, ಇದಕ್ಕೆ ತಕ್ಕ ಬಂದೋ ಬಸ್ತ್‌ ಅನ್ನು ಕಲ್ಪಿಸಲಾಗಿದೆ. ಸಾಕಷ್ಟು ಬಸ್‌ಗಳಲ್ಲಿ ಆಗಮಿಸುತ್ತಿರುವ ಜನರಿಗೆ ಭದ್ರತಾ ವ್ಯವಸ್ಥೆ ನೀಡಲು 600 ಪೊಲೀಸರನ್ನು ನಿಯೋಜಿಸಲಾಗಿದೆ.

ಜ್ವರದಿಂದ ಬಳಲಿದ ಸಿದ್ಧರಾಮಯ್ಯ

ನೆನ್ನೆ ಪಾದಯಾತ್ರೆ ಆರಂಭಗೊಂಡ ಕೆಲ ಹೊತ್ತಿನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತೀವ್ರ ಸುಸ್ತಾದವರಂತೆ ಕಾಣಿಸುತ್ತಿದ್ದರು. ಜ್ವರದಿಂದ ಬಳಲುತ್ತಿರುವ ಸಿದ್ದರಾಮಯ್ಯನವರು ಇಂದು ಒಂದು ಗಂಟೆಗಳ ಕಾಲ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ.

Share Post