Bengaluru

ವೀಕೆಂಡ್‌ ಕರ್ಫ್ಯೂ ಬಳಿಕ ಸಹಜ ಸ್ಥಿತಿಯತ್ತ ರಾಜ್ಯ

ಬೆಂಗಳೂರು : ಕರ್ನಾಟಕ ರಾಜ್ಯ ವೀಕೆಂಡ್‌ ಕರ್ಫ್ಯೂ ವಿಧಿಸಿತ್ತು. ಶುಕ್ರವಾರ ರಾತ್ರಿ ೧೦ ಗಂಟೆಯಿಂದ ಸೋಮವಾರ ಬೆಳಗ್ಗೆ ೫ ಗಂಟೆವರೆಗೆ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿತ್ತು. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೂ ಜನ ಮೈಮರೆಯುವಂತಿಲ್ಲ. ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲೇಬೇಕು. ಜೊತೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿ ಇದ್ದೇ ಇದೆ.

ಪಾರ್ಕ್‌, ಪಬ್‌, ರೆಸ್ಟೋರೆಂಟ್‌, ಮಾರ್ಕೆಟ್‌, ಥಿಯೇಟರ್‌ ಸೇರಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್‌ ಆಗಿದ್ದವು. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಬಿಎಂಟಿಸಿ ಬಸ್‌ ಸೇರಿದಂತೆ ಎಲ್ಲಾ ಸೇವೆಗಳು ಸಹಜ ಸ್ಥಿತಿಗೆ ಮರಳಿದೆ.

ಕೋವಿಡ್‌ ಮೂರನೇ ಅಲೆ ಅಬ್ಬರಿಸುತ್ತಿದ್ದು ರಾಜ್ಯದಲ್ಲಿ ನಿನ್ನೆ ಒಂದೇ ದಿನ ೧೨೦೦೦ ಹೊಸ ಪ್ರಕರಣಗಳು ದಾಖಲಾಗಿದೆ. ಎರಡು ಡೋಸ್‌ ಲಸಿಕೆ ಪಡೆದವರಿಗೂ ಪಾಸಿಟಿವ್‌ ಬರುತ್ತಿರೋದು ಆತಂಕದ ವಿಷಯವಾಗಿದೆ. ಇನ್ನು ಕೆಲವು ವರ್ಷಗಳು ನಾವು ಕೊರೊನಾದ ಜೊತೆ ಜೀವಿಸೋದನ್ನು ಕಲಿಯಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದೆ. ಮೂರನೇ ಅಲೆ ಮಾರ್ಚ್‌ ಅಂತ್ಯದವರೆಗೂ ಇರಲಿದೆ ಎಂದು ತಜ್ಞರು ಹೇಳಿದ್ದಾರೆ.

ಇದರ ನಡುವೆ ಕಾಂಗ್ರೆಸ್‌ನವರು ಮಹಾದಾಯಿ ಜನಾಂದೋಲನಕ್ಕೆ ಚಾಲನೆ ನೀಡಿದ್ದು ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಮೊದಲು ಅನುಮತಿ ನೀಡಲಿಲ್ಲವಾದರೂ, ನಂತರ ಪಾದಯಾತ್ರೆಗೆ ಯಾವುದೇ ಅಡ್ಡಿ ಪಡಿಸಿಲ್ಲ.

ಮತ್ತೆ ಮುಂದಿನ ಶುಕ್ರವಾರ ರಾತ್ರಿ ೧೦ ರಿಂದ ಸೋಮವಾರ ಬೆಳಗ್ಗೆ ೫ರ ವರೆಗೆ ಜನಜೀವನ ಸ್ತಭ್ದವಾಗಲಿದೆ. ಮುಂದಿನವಾರ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಇನ್ನಷ್ಟು ಟಫ್‌ ರೂಲ್ಸ್‌ ಹೇರುವುದರ ಬಗ್ಗೆ ಚಿಂತಿಸಲಿದೆ.

Share Post