ಢಾಕಾದಲ್ಲಿ ನಿರಾಶ್ರಿತರ ಶಿಬಿರಕ್ಕೆ ಬೆಂಕಿ; ನೂರಾರು ಮನೆಗಳು ಬೆಂಕಿಗಾಹುತಿ..!
ಢಾಕಾ: ಬಾಂಗ್ಲಾದೇಶದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ. ರೊಹಿಂಗ್ಯಾ ನಿರಾಶ್ರಿತರ ಶಿಬಿರದ ನೂರಾರು ಗುಡಿಸಲುಗಳಿಗೆ ಬೆಂಕಿ ಬಿದ್ದಿದ್ದು, ಎಲ್ಲವೂ ಸುಟ್ಟು ಭಸ್ಮವಾಗಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಸಾವುನೋವುಗಳ ಸಂಭವಿಸಿಲ್ಲ.
ದಕ್ಷಿಣ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ರೊಹಿಂಗ್ಯಾ ನಿರಾಶ್ರಿತರು ವಾಸಿಸುತ್ತಾರೆ. ಇಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ನಿರಾಶ್ರಿತರಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಕು ಹಲವು ಕಡೆ ವ್ಯಾಪಿಸಿದ್ದು, ವಿಪತ್ತು ನಿರ್ವಹಣಾ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ.
ಮ್ಯಾನ್ಮಾರ್‌ನಲ್ಲಿ ೨೦೧೭ರಲ್ಲಿ ಮಿಲಿಟರಿ ದಂಗೆ ಉಂಟಾಗಿತ್ತು. ಈ ವೇಳೆ ಲಕ್ಷಂತರ ಮಂದಿ ಮ್ಯಾನ್ಮಾರ್ ಬಿಟ್ಟು ಪಲಾಯನಗೈದಿದ್ದರು. ಅದ್ರಲ್ಲಿ ಒಂದಷ್ಟು ಲಕ್ಷ ಮಂದಿ ಬಾಂಗ್ಲಾದೇಶ ಪ್ರವೇಶಿಸಿ, ಅಲ್ಲಿ ಆಶ್ರಯ ಪಡೆದಿದ್ದರು. ಟೆಂಟ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದರು.