Districts

ಮನೆಯಿಂದ ಹೊರಗೆ ಬಂದರೆ ಬೀಳುತ್ತೆ ಫೈನ್‌ !

ಶಿವಮೊಗ್ಗ: ವೀಕೆಂಡ್‌ ಕರ್ಫ್ಯೂನಿಂದಾಗಿ ಶಿವಮೊಗ್ಗದಲ್ಲಿ ಪೊಲೀಸರು ಫೀಲ್ಡ್‌ ಗೆ ಇಳಿದಿದ್ದಾರೆ. ನಗರದಲ್ಲಿ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದೀಗ
ಪೊಲೀಸರ ಕಾರ್ಯಾಚರಣೆ ಆರಂಭಿಸಿದ್ದು, ಮಾಸ್ಕ್‌ ಇಲ್ಲದೆ ಬಂದವರಿಗೆ ದಂಡ ವಿಧಿಸುತ್ತಿದ್ದಾರೆ. ಜೊತೆಗೆ ನಗರಲ್ಲಿ ಅನಗತ್ಯವಾಗಿ ಮನೆಯಿಂದ ಹೊರಗೆ ಬಂದರೆ ಫೈನ್‌ ಹಾಕುತ್ತಿದ್ದಾರೆ.
ಬಸ್ ಗಳು, ಕಾರು, ಜೀಪ್ ಗಳು, ಟೆಂಪೋಗಳನ್ನು ತಪಾಸಣೆ ಮಾಡುತ್ತಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದಾರೆ. ನಗರದ ಶಿವಪ್ಪನಾಯಕ ಸರ್ಕಲ್, ಅಶೋಕ ಸರ್ಕಲ್ ಹಾಗೂ ಗೋಪಿ ಸರ್ಕಲ್ ನಲ್ಲಿ ಪೊಲೀಸರ ಕಾರ್ಯಾಚರಣೆ ಆರಂಭಿಸಿದ್ದಾರೆ. ಆರಂಭಿಕ ಹಂತವಾಗಿ ಕೇವಲ ದಂಡ ವಿಧಿಸುತ್ತಿದ್ದು, ವಾಹನ ಸೀಜ್ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. ನಗರದ ಸುತ್ತಮತ್ತ ಮಾರುಕಟ್ಟೆಗಳು ಬಂದ್‌ ಆಗಿವೆ. ಬಸ್‌ ಸಂಚಾರ ಕೂಡ ಇದೆ. ಆದರೆ ಪ್ರಯಾಣಿಕರು ಯಾರು ಖಾಸಗಿ ಬಸ್‌ ನಿಲ್ದಾಣದ ಕಡೆ ಬರುತ್ತಿಲ್ಲ.

Share Post