Bengaluru

ವೀಕೆಂಡ್‌ ಕರ್ಫ್ಯೂ: ಮಾರುಕಟ್ಟೆಯಲ್ಲಿ ಜನರಿಲ್ಲದೆ ಖಾಲಿ ಖಾಲಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕೆಲ ನಿರ್ಬಂಧ ಹೇರಿದೆ. ಶುಕ್ರವಾರ ರಾತ್ರಿಯಿಂದಲೇ ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ ವಿಧಿಸಿದ್ದಾರೆ. ಹೀಗಾಗಿ ನಗರದ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಅನಗತ್ಯ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆಯಿಂದ ಜನರು ಯಾರು ಹೊರಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳು ಸ್ತಬ್ಧವಾಗಿದೆ. ನಗರದ ಕೆ.ಆರ್‌ ಮಾರುಕಟ್ಟೆ ಹಾಗೂ ಯಶವಂತಪುರ ಮಾರುಕಟ್ಟೆಗಳು ಜನರಿಲ್ಲದೆ ಖಾಲಿ ಖಾಲಿ ಆಗಿದೆ. ಇದ್ದರಿಂದ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ.
ಇನ್ನು ಕೆಂಪೇಗೌಡ ಏರ್‌ಪೋರ್ಟ್‌ ನಲ್ಲಿ ಬೆಳಗ್ಗೆಯಿಂದಲೇ ಜನದಟ್ಟಣೆ ಹೆಚ್ಚಾಗಿದೆ. ಹೊರ ರಾಜ್ಯಗಳಿಗೆ ಜನರು ತೆರಳುತ್ತಿದ್ದಾರೆ. ಹೀಗಾಗಿ ಏರ್‌ ಪೋರ್ಟ್‌ ನಲ್ಲಿ ಕೊರೋನಾ ನಿಯಮ ಪಾಲನೆ ಮಾಡಲಾಗಿದೆ. ಜೊತೆಗೆ ಸಿಬ್ಬಂದಿಗಳು ಜನರನ್ನು ತಪಾಸಣೆ ಮಾಡಿ ಏರ್‌ ಪೋರ್ಟ್‌ ಒಳಗೆ ಬಿಡಲಾಗಿದೆ.
ಇತ್ತ ಕರ್ಫ್ಯೂನಿಂದ ಜನರಿಗೆ ಅಗತ್ಯ ಸೇವೆ ಬಿಟ್ಟರೆ ಬೇರೆ ಏನು ಸಿಗೋದಿಲ್ಲ ಎಂದು  ಹೇಳಿದ್ದರು. ಆದರೆ ಇದೀಗ ನಗರದಲ್ಲಿ ಕೆಲ ಕಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ. ಇದನ್ನು ಖರೀದಿಸಲು ಜನರು ಮುಗಿಬಿದ್ದಾರೆ.

Share Post