ಓಟಿಟಿಯಿಂದ ಬಿಗ್ ಆಫರ್ – ಒಪ್ಪುತ್ತಾ ವಿಕ್ರಾಂತ್ ರೋಣ ತಂಡ ?
ಬೆಂಗಳೂರಿಗೆ : ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಫೆಬ್ರುವರಿ 24 ರಲ್ಲಿ ತೆರೆಗೆ ಬರಲು ಸಜ್ಜಾಗಿತ್ತು. ಈಗಿನ ಕೊರೊನಾ ಪರಿಸ್ಥಿತಿ ನೋಡಿದರೆ ಅದು ಬಹುತೇಕ ಸಾಧ್ಯವಾಗುವುದಿಲ್ಲ ಎಂದೆನಿಸುತ್ತೆ. ಚಿತ್ರಮಂದಿರಗಳಿಗೆ ಈಗ 50-50 ರೂಲ್ಸ್ ಬಂದಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೇಸ್‌ಗಳನ್ನು ಗಮನಿಸಿದರೆ ಸದ್ಯಕ್ಕೆ ಧಿಯೇಟರ್‌ಗಳಲ್ಲಿ ಬಿಗ್ ಸಿನಿಮಾಗಳು ಬರುವ ಸಾಹಸ ಮಾಡಲ್ಲ.
ಇನ್ನು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ಆಗಿರುವ ವಿಕ್ರಾಂತ್ ರೋಣ ಕೂಡ ಇದಕ್ಕೆ ಹೊರತಾಗಿಲ್ಲ. ಮಾಸ್ ಆಡಿಯನ್ಸ್ ಹೊಂದಿರುವ ಸುದೀಪ್ ಅವರ ಸಿನಿಮಾಗಳು ಏನಾದರೂ 50-50 ರೂಲ್ಸ್‌ನಲ್ಲಿ ತೆರೆಕಂಡರೆ ಅಭಿಮಾನಿಗಳಿಗೆ ಹಾಗೂ ಚಿತ್ರತಂಡಕ್ಕೆ ನಷ್ಟ ಉಂಟಾಗುತ್ತದೆ. ಇನ್ನು ವಿಕ್ರಾಂತ್ ರೋಣ ಸಿನಿಮಾ 3D ಅವತಾರ ಬೇರೆ ಎತ್ತಿದೆ. ನೆಚ್ಚಿನ ನಟನನ್ನು ದೊಡ್ಡ ಪರದೆಯ ಮೇಲೆ ಆರಾಧಿಸಲು ಇಷ್ಟ ಪಡುತ್ತಾರೆಯೋ ಹೊರತು ಚಿಕ್ಕ ಸ್ಕ್ರೀನ್ ಮೇಲಲ್ಲ.
ಆದರೂ ಓಟಿಟಿಯಿಂದ ಬಹು ದೊಡ್ಡ ಆಫರ್ ವಿಕ್ರಾಂತ್ ರೋಣ ಸಿನಿಮಾಗೆ ಸಿಕ್ಕಿದೆ ಎನ್ನಲಾಗ್ತಿದೆ. ಪ್ರತಿಷ್ಟಿತ ಎರಡು ಓಟಿಟಿ ಸಂಸ್ಥೆಗಳು ವಿಕ್ರಾಂತ್ ರೋಣ ಸಿನಿಮಗೋಸ್ಕರ ಪೈಪೋಟಿಗೆ ಬಿದ್ದಿವೆ. ಗಾಂಧಿನಗರದ ಸಿನಿ ಪಂಡಿತರ ಲೆಕ್ಕಾಚಾರದ ಪ್ರಕಾರ ಸಿನಿಮಾಗೆ 100 ಕೋಟಿ ಆಫರ್ ಬಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಈ ಮೊತ್ತದ ಆಫರ್ ಬಂದಿದೆ ಎನ್ನಲಾಗ್ತಿದೆ. ನಿರ್ಮಾಪಕರು ೧೦೦ ಕೋಟಿ ಎಂದು ಒಪ್ಪದಿದ್ದರೂ ಕೂಡ ದೊಡ್ಡ ಆಫರ್ ಬಂದಿದೆ ಎಂದು ಒಪ್ಪಿಕೊಂಡಿದ್ದಾರೆ.
ನಿರ್ಮಾಪಕ ಜಾಕ್ ಮಂಜು ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವ ಉದ್ದೇಶ ಇಲ್ಲ. ನಾವು ಸಿನಿಮಾ 3D ಮಾಡಿರುವುದೇ ಥಿಯೇಟರ್‌ನಲ್ಲಿ ಸಿನಿಮಾ ಸವಿಯಲು. ರಿಲೀಸ್ ನಂತರವಷ್ಟೇ ಓಟಿಟಿ ಹೋಗ್ತೀವಿ. ಇನ್ನು ಕೊರೊನಾ ನೋಡಿಕೊಂಡು ಹಾಗೆಯೇ ಸುದೀಪ್ ಅವರೊಟ್ಟಿಗೆ ಮಾತನಾಡಿದ ಬಳಿಕವಷ್ಟೇ ನಾವು ಡಿಸೈಡ್ ಮಾಡ್ತೀವಿ, ಸದ್ಯದ ಮಟ್ಟಿಗೆ ಓಟಿಟಿ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.