Bengaluru

ಬೆಂಗಳೂರಲ್ಲಿ ಇಂದಿನಿಂದ ಶಾಲಾ ಕಾಲೇಜು ಬಂದ್‌

ಬೆಂಗಳೂರು : ಕೋವಿಡ್‌ ನಿಯಂತ್ರಿಸುವ ನಿಟ್ಟಿನಿಂದ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿತ್ತು. ಇದರಂತೆ ಬೆಂಗಳೂರಿನಲ್ಲಿ 15 ದಿನ ಶಾಲಾ ಕಾಲೇಜು ಬಂದ್‌ ಆಗಿರಲಿವೆ. ರಾಜ್ಯದೆಲ್ಲೆಡ ನೈಟ್‌ ಕರ್ಫ್ಯೂ ಮತ್ತು ವೀಕೆಂಡ್‌ ಲಾಕ್‌ಡೌನ್‌ ಕೂಡ ಜಾರಿಯಲ್ಲಿದೆ.

೧೦ನೇ ಕ್ಲಾಸ್‌ ವಿದ್ಯಾರ್ಥಿಗಳು, ದ್ವಿತಿಯ ಪಿಯುಸಿ ವಿದ್ಯಾರ್ಥಿಗಳು, ಇನ್ನು ಮೆಡಿಕಲ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಹೊರತುಪಡಿಸಿ ಮಿಕ್ಕೆಲ್ಲರಿಗೂ ಆಫ್‌ಲೈನ್‌ ಕ್ಲಾಸ್‌ ಅನ್ನು ಬಂದ್‌ ಮಾಡಲಾಗಿದೆ. ಆದರೆ ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬಹುದು ಎಂದು ಸರ್ಕಾರ ಹೇಳಿದೆ.

ಬೆಂಗಳೂರು ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತಿವೆ, ಆದರೆ ಅಲ್ಲಿಯೂ ೨ಕ್ಕಿಂತ ಹೆಚ್ಚು ಪಾಸಿಟೀವ್‌ ರೇಟ್‌ ಬಂದರೆ ಅಲ್ಲಿಯೂ ಆಫ್‌ಲೈನ್‌ ತರಗತಿಗಳನ್ನು ಬಂದ್‌ ಮಾಡಲಾಗುವುದು.

ನೆರೆ ರಾಜ್ಯಗಳಲ್ಲಿಯೂ ಕೋವಿಡ್‌ ಹೆಚ್ಚಳದ ಕಾರಣ ನೈಟ್‌ ಕರ್ಫ್ಯೂ ಮತ್ತು ಶಾಲಾ ಕಾಲೇಜ್‌ ಬಂದ್‌ ಮಾಡಿವೆ. ಅದೇ ಮಾದರಿ ಅನ್ನು ಕರ್ನಾಟಕ ಅನುಸರಿಸುತ್ತಿದೆ.

Share Post