Technology

ಇಂದಿನಿಂದ ಬ್ಲಾಕ್‌ಬೆರ್ರಿ ಫೋನ್‌ ನಿಷ್ಕ್ರಿಯ

ಒಟ್ಟಾವಾ : ನಿಮ್ಮ ಬ್ಲಾಕ್‌ ಬೆರ್ರಿ ಫೋನ್‌ ಇಂದಿನಿಂದ ಕೆಲಸ ನಿರ್ವಹಿಸುವುದಿಲ್ಲ. ಕ್ವರ್ಟಿ ಕೀಪ್ಯಾಡ್‌ನಿಂದ ಬಾರಿ ಜನಪ್ರೀಯತೆಗಳಿಸಿದ್ದ ಫೋನ್‌ಗಳು ಇಂದಿನಿಂದ ಕಾರ್ಯನಿರ್ವಹಿಸುವುದಿಲ್ಲ. ಈ ಫೋನ್‌ಗಳಿಂದ ಕರೆ ಮಾಡಲು, ಸಂದೇಶ ಕಳುಹಿಸಲು, ಇಂಟರ್‌ನೆಟ್, ವೈಫೈಗಳಂತಹ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ತನ್ನ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

ನಿಷ್ಕ್ರಿಯಗೊಳ್ಳುತ್ತಿರುವ ಫೋನ್‌ಗಳು ಯಾವು ಎಂದರೆ ಬ್ಲ್ಯಾಕ್‌ಬೆರಿ 7.1 ಒಎಸ್, ಬ್ಲ್ಯಾಕ್‌ಬೆರಿ 10 ಸಾಫ್ಟ್ವೇರ್, ಬ್ಲ್ಯಾಕ್‌ಬೆರಿ ಪ್ಲೇಬುಕ್2.1 ಹಾಗೂ ಇದರ ಹಿಂದಿನ ಆವೃತ್ತಿಗಳು. ಆಂಡ್ರಾಯ್ಡ್  ಹೊಂದಿರುವ ಬ್ಲ್ಯಾಕ್‌ಬೆರಿ ಮೊಬೈಲ್‌ಗಳನ್ನು ಬಳಸುವವರು ಚಿಂತೆ ಪಡುವ ಅಗತ್ಯ ಇಲ್ಲ. ಈ ಸಾಧನಗಳು ಮುಂದೆಯೂ ಕಾರ್ಯನಿರ್ವಹಿಸಲಿದೆ.

ನಿಮ್ಮ ಬ್ಲಾಕ್‌ಬೆರ್ರಿಯಲ್ಲಿ ಸೇವ್‌ ಆಗಿರುವ ಡೇಟಾವನ್ನು ನೀವು ಬೇಕಾದರೆ ಪಡೆಯಬಹುದಾಗಿದೆ. ಕೆಲವು ದಿನಗಳ ನಂತರ ಆ ಡೇಟಾವನ್ನೂ ಕೂಡ ಕಂಪನೆ ಅಳಿಸಿ ಹಾಕಲಿದೆ.

Share Post