ರಕ್ಕಸ ಭಯೋತ್ಪಾದಕನ ಕತೆ ಖತಂ: ಅಧಿಕೃತ ಮಾಹಿತಿ
ಶ್ರೀನಗರ: ಭಾರತಕ್ಕೆ ಬೆಂಬಿಡದ ಭೂತವಾಗಿ ಕಾಡುತ್ತಿರುವ ಭಯೋತ್ಪಾದನೆ ವಿರುದ್ಧ ಹೋರಾಡಲು ದೇಶದ ಸೈನಿಕರೂ ಸದಾ ಸಿದ್ದವಾಗಿರುತ್ತಾರೆ. ಪ್ರತಿದಿನ ದೇಶದ ಗಡಿಯಲ್ಲಿ ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಕಾಳಗ ನಡೆಯುತ್ತಲೇ ಇರುತ್ತದೆ. ಹೋರಾಟದಲ್ಲಿ ಮಡಿದ ವೀರ ಯೋಧರಷ್ಟೋ, ಸೇನೆಯ ಗುಂಡಿಗೆ ಬಲಿಯಾದ ಕಿರಾತಕ ಭಯೋತ್ಪಾದಕರೆಷ್ಟೋ ಅದರಲ್ಲಿ ಹಲವಾರು ಘೋರ ಘಟನೆಗಳಲ್ಲಿ ಭಾಗಿಯಾಗಿದ್ದ ಮೋಸ್ಟ್ ವಾಂಟೆಡ್ ಉಗ್ರನನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಜಮ್ಮು-ಕಾಶ್ಮೀರದ ಶ್ರೀನಗರ ಹೊರವಲಯದಲ್ಲಿ ಹರ್ವಾನ್‌ನಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಎಲ್‌ಇಟಿ ಉಗ್ರ ಸಲೀಂ ಪರೆಯ್ ಅನ್ನು ಗುಂಡಿಕ್ಕಿದ್ದಾಗಿ ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ಉಗ್ರನ ಸಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕಾರ್ಯಾಚರಣೆ ಇಷ್ಟಕ್ಕೆ ನಿಲ್ಲಿಸದೇ ಮತ್ತಷ್ಟು ಉಗ್ರರ ಬಲಿಗಾಗಿ ಯೋಧರ ಪಡೆ ಕಾರ್ಯಾಚರನೆ ನಡೆಸುತ್ತಿದೆ. ಎಂದು ಬರೆದುಕೊಂಡಿದ್ದಾರೆ.
ಬಲಿಯಾದವ ಬಹಳ ಕ್ರೂರಿಯಾಗಿದ್ದು 2017–18ರಲ್ಲಿ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಜಿನ್ ಪ್ರದೇಶದಲ್ಲಿ ಕೆಲ ನಿವಾಸಿಗಳ ತಲೆ ಕಡಿದು ಅಟ್ಟಹಾಸ ಮರೆದಿದ್ದ ಎನ್ನಲಾಗಿದೆ. ಅಲ್ಲದೆ ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಸಲೀಮ್ ಹೆಸರು ಕೂಡ ಇತ್ತು ಎಂಬ ಮಾಹಿತಿಯಿದೆ.
#SrinagarEncounterUpdate: Only 1 #terrorist neutralized. Terrorist Salim Parray of proscribed #terror outfit LeT Salim Parray neutralized. #Operation going on. Further details shall follow. IGP Kashmir@JmuKmrPolice https://t.co/MGKwkrXf16
— Kashmir Zone Police (@KashmirPolice) January 3, 2022