ಮೋದಿ ಆಕ್ಷೇಪಾರ್ಹ ಮಾತಿಗೆ ಮೇಘಾಲಯ ರಾಜ್ಯಪಾಲರು ಕಿಡಿ
ಮೇಘಾಲಯ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ. ಮೋದಿಗೆ ಮನುಷ್ಯತ್ವ ಇಲ್ಲ, ಅವರಿಗೆ ಬಹಳ ದುರಹಂಕಾರಿ ಎಂಬ ಮಾತನ್ನು ಕಾರ್ಯಕ್ರಮವೊಂದರಲ್ಲಿ ಹೇಳಿರುವ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದೆ.
ʻರೈತರಿಗೆ ಸಿಗಬೇಕಾದ ಅಗತ್ಯ ನೆರವು ದೊರೆಯುತ್ತಿಲ್ಲ, ಅವರ ಅಭಿವೃದ್ಧಿಯ ಜೊತೆಗೆ ಗಡಿಯಲ್ಲಿ ರೈತರ ಪ್ರತಿಭಟನೆ ಮತ್ತು ಅಲ್ಲಿ ನಡೆದ ಸಾವು-ನೋವುಗಳ ಬಗ್ಗೆ ಮಾತನಾಡಲು ನಾನು ಮಾನ್ಯ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ, ಪ್ರತಿಭಟನೆಯಲ್ಲಿ ನಮ್ಮ ರೈತರೂ ಸೇರಿದಂತೆ ಸಾವಿರಾರು ರೈತರು ಸಾವನ್ನಪ್ಪಿದ್ದಾರೆ. ಈ ಮಾತನ್ನು ನಾನು ಹೇಳಿದ ಕೂಡಲೇ ಮೋದಿಯವರು “ರೈತರು ನನಗಾಗಿ ಸತ್ತಿದ್ದಾರೆಯೇ” ಎಂದು ನಿರ್ಲಕ್ಷ್ಯ ಮನೋಭಾವದಲ್ಲಿ ಮಾತನಾಡಿದ್ದಾರೆ. ಇದರಿಂದ ತುಂಬಾ ನೋವಾಗಿ “ನೀವು ರಾಜನಾಗಿರುವುದರಿಂದ ಅವರು ಸತ್ತಿದ್ದು ನಿಮಗಾಗಿಯೇ” ಎಂದು ಉತ್ತರಿಸಿದೆ. ಆ ಮಾತು ಕೇಳಿದ ತಕ್ಷಣ ಮತ್ತೇನು ಮಾತಾಡಲು ನನಗೆ ಧ್ವನಿ ಬರದೆ ಎದ್ದು ಬಂದೆʼ ಎಂದಿರುವ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ನನ್ನ ಈ ಮಾತು ಆಕ್ಷೇಪಾರ್ಹವಾಗಿದ್ದಲ್ಲಿ ನಾನು ನನ್ನ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವುದಕ್ಕೂ ಸಿದ್ದನಿದ್ದೇನೆ. ಓರ್ವ ರೈತನ ಮಗನಾಗಿ ಹುಟ್ಟಿದ ನಾನು ಅವರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ. ಯಾರು ತಪ್ಪು ತಿಳಿದುಕೊಂಡರೂ ಪರವಾಗಿಲ್ಲ, ರೈತರ ಅಭಿವೃದ್ದಿ ಇರಲಿ ಅವರ ಸಾವಿನ ಬಗ್ಗೆ ಚೂರು ಕನಿಕರ ತೋರಿಸದ ನಾಯಕರು ಇದ್ದಾರಲ್ಲ ಈ ಬಗ್ಗೆ ಯೋಚನೆ ಮಾಡುವುದಕ್ಕೂ ಬಹಳ ವಿಷಾದ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
घमंड…क्रूरता…संवेदनहीनता
भाजपा के राज्यपाल के इस बयान में पीएम मोदी के व्यक्तित्व में शामिल इन्हीं 'गुणों' का बखान है।
मगर, ये एक लोकतंत्र के लिए चिंता की बात है। pic.twitter.com/HGxzKfYsme
— Congress (@INCIndia) January 3, 2022