ನಾಳೆ ಕೋವಿಡ್ ತಜ್ಞರ ಜೊತೆ ಸಿಎಂ ಸಭೆ
ಬೆಂಗಳೂರು : ಕೋವಿಡ್, ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿರುವ ಕಾರಣ ನಾಳೆ ತಜ್ಞರ ಜೊತೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಇಂದಿನಿಂದ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಅಧಿಕೃತ ಚಾಲನೆ ಕೊಟ್ಟ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು. ಕೋವಿಡ್ ಮತ್ತು ಓಮಿಕ್ರಾನ್ ಹರಡುವಿಕೆ ಹೆಚ್ಚಿದೆ. ಇದರ ಬಗ್ಗೆ ತಜ್ಞರ ಜೊತೆ ನಾಳೆ ಸಭೆ ನಡೆಸಲಿದ್ದೇವೆ. ಗುರುವಾರ ಕ್ಯಾಬಿನೆಟ್‍ನಲ್ಲಿ ಮಹತ್ವದ ತೀರ್ಮಾನದ ಜೊತೆಗೆ ದೀರ್ಘಾವಧಿ ಕ್ರಮ ತೆಗೆದುಕೊಳ್ಳುತ್ತೇವೆ. ಜನರಿಗೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮಕ್ಕಳ ಲಸಿಕೆ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ. 15-18 ವರ್ಷದ ಮಕ್ಕಳಿಗೆ ಇಂದಿನಿಂದ ಕೋವ್ಯಾಕ್ಸಿನ್ ಲಸಿಕೆ ನೀಡಲಾಗ್ತಿದೆ.
ಜನರು ಸ್ವಯಂ ನಿಯಂತ್ರಣ ಹಾಕೋಬೇಕು, ಕೋವಿಡ್ ಸಂಬಂಧಿತ ಸರ್ಕಾರ ಹಾಕಿರುವ ನಿಯಮಗಳ ಪಾಲನೆ ಮಾಡಬೇಕಾಗಿದೆ. ಆರೋಗ್ಯದ ಬಗ್ಗೆ ಜನರು ಕಾಳಜಿವಹಿಸಬೇಕು ಎಂದು ಸಿಎಂ ಹೇಳಿದ್ದಾರೆ.
ಮೇಕೆದಾಟು ವಿಚಾರವಾಗಿ ಕಾಂಗ್ರೆಸ್‌ನವರು ಹಮ್ಮಿಕೊಂಡಿರುವ ಪಾದಯಾತ್ರೆಯ ಬಗ್ಗೆ ಮಾತನಾಡಿದ ಸಿಎಂ, ʼ ಸರ್ಕಾರದ ನಿರ್ಧಾರಗಳು ಕಾಂಗ್ರೆಸ್‌ಗೂ ಅನ್ವಯಿಸುತ್ತದೆ ಎಂದು ಹೇಳಿದರು.