ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೊಲ್ಕತ್ತ : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೋವಿಡ್ ಇಂದ ಬಳಲುತ್ತಿದ್ದರು. ಮುನ್ನೆಚರಿಕೆಯ ಕ್ರಮವಾಗಿ ಅವರು ಆಸ್ಪತ್ರೆ ಸೇರಿದ್ದರು. ಈಗ ಡಿಸ್ಚಾರ್ಜ್ ಆಗಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲಿದ್ದಾರೆ.
ಗಂಗೂಲಿ ಅವರ RTPCR ರಿಸಲ್ಟ್ ಪಾಸಿಟಿವ್ ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಗಾಗಿತ್ತು. ಈಗ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ವರ್ಷ ಗಂಗೂಲಿ ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿಂದೆ ಲಘು ಹೃದಯಾಘಾತದ ಕಾರಣ ಅವರಿಗೆ ಸ್ಟಂಟ್ ಕೂಡ ಹಾಕಲಾಗಿದೆ.