Bengaluru

ಮೋಜು- ಮಸ್ತಿ ಮಾಡಿದರೆ ಬೀಳುತ್ತೆ ಕೇಸ್‌

ಬೆಂಗಳೂರು: ಇನ್ನೇನು ಹೊಸ ವರ್ಷಕ್ಕೆ ಕೌಂಟ್‌ ಡೌನ್‌ ಶುರುವಾಗಿದೆ. ಹೊಸ ವರ್ಷ ಬರ ಮಾಡಿಕೊಳ್ಳಲು ಜನರು ಸಿದ್ಧತೆ ಮಾಡಿಕೊಳ್ಳಲೆಗಿದೆ. ಇನ್ನೇನು ೨೦೨೧ಕ್ಕೆ ಗುಡ್‌ ಬೈ ಹೇಳಿ, ೨೦೨೨ ಹೊಸ ವರ್ಷಕ್ಕೆ ವೆಲ್‌ ಕಾಮ್‌ ಮಾಡಲಿದ್ದಾರೆ. ಆದರೆ ಈ ಬಾರಿಯೂ ಕೂಡ ಸರ್ಕಾರ ವರ್ಷಾಚರಣೆ ಬ್ರೇಕ್‌ ಹಾಕಿದ್ದಾರೆ.ಕೊರೋನಾ ಹಾವಳಿ ತಡೆಗಟ್ಟುವ ಸಲುವಾಗಿ ನೈಟ್‌ ಕರ್ಫ್ಯೂ ವಿಧಿಸಿದೆ. ಇದ್ದರಿಂದಾಗಿ ಹೊಸ ವರ್ಷ ಆಚರಣೆ ಕೂಡ ಜನರಿಗೆ ಹೊಡೆತಬಿದ್ದಿದೆ. ಈಗಾಗಲೇ ನಾಲ್ಕು ದಿನದಿಂದ ಕರ್ಫ್ಯೂ ಇದ್ದು, ಹೊಸ ವರ್ಷ ಹಿನ್ನೆಲೆಯಲ್ಲಿ ಇನ್ನಷ್ಟು ಬಿಗಿ ಭದ್ರತೆ ಕೈಗೊಂಡಿದೆ. ಮನೆಯಲ್ಲೇ ಹೊಸ ವರ್ಷ ಆಚರಣೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ರಸ್ತೆಗೆ ಬಂದು ಆಚರಣೆ ಮತ್ತು ಮೋಜು ಮಸ್ತಿ ಮಾಡಿದರೆ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಪಬ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್ ಗಳಲ್ಲಿ ಶೇ.೫೦ರಷ್ಟು ಆಸನಗಳಿಗೆ ಅನುಮತಿ ನೀಡಿದ್ದಾರೆ. ಆದರೆ ನೈಟ್‌ ೧೦ ಗಂಟೆಗೆ ಕರ್ಫ್ಯೂ ಇರುವುದರಿಂದ ಎಲ್ಲವೂ ೧೦ ಗಂಟೆಗೆ ಬಂದ್‌ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಜನರು ರೆಸಾರ್ಟ್‌ ಗಳತ್ತ ಆಚರಣೆಗೆ ಮುಂದಾಗಿದ್ದಾರೆ. ಇನ್ನು ಕೆಲವರು ಬೀಚ್‌ ಕಡೆಗೆ ಹೋಗಿದ್ದಾರೆ. ಅಲ್ಲೂ ಕೂಡ್‌ ನಿಷೇಧ ಹೇರಿದ್ದಾರೆ.

Share Post