ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ; ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು
ಬೆಂಗಳೂರು: ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಸಮಬಲದ ಪ್ರದರ್ಶನ ನೀಡಿವೆ. ಆದರೆ, ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್ ಪ್ರಬಲ ಹೋರಾಟ ನಡೆಸಿದೆ. ಒಟ್ಟಾರೆ ಪಡೆದ ಸ್ಥಾನಗಳನ್ನು ನೋಡಿದರೆ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿ ಹಾಗೂ ಶ್ರೀರಾಮುಲು ಅವರ ತವರು ಕ್ಷೇತ್ರ ಮೊಳಕಾಲ್ಮೂರಿನಲ್ಲೂ ಬಿಜೆಪಿ ಮಕಾಡೆ ಮಲಗಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಯಾವ ಪಕ್ಷಗಳು ಎಷ್ಟು ಸೀಟುಗಳನ್ನು ಗೆದ್ದಿವೆ..? ಇಲ್ಲಿದೆ ಅಂಕಿ-ಅಂಶ:
ನಗರಸಭೆ:
ಬಿಜೆಪಿ – 67
ಕಾಂಗ್ರೆಸ್ – 61
ಜೆಡಿಎಸ್ – 12
ಇತರೆ – 26
ಒಟ್ಟು : 166
ಪುರಸಭೆ:
ಬಿಜೆಪಿ – 176
ಕಾಂಗ್ರೆಸ್ – 201
ಜೆಡಿಎಸ್ – 21
ಇತರೆ – 43
ಒಟ್ಟು: 441
ಪಟ್ಟಣ ಪಂಚಾಯತಿ:
ಬಿಜೆಪಿ – 194
ಕಾಂಗ್ರೆಸ್ – 236
ಜೆಡಿಎಸ್ – 12
ಇತರ – 135
ಒಟ್ಟು: 577