Bengaluru

ಗರುಡ ಮಾಲ್‌ಗೆ 20000 ದಂಡ ವಿಧಿಸಿದ ಬಿಬಿಎಂಪಿ

ಬೆಂಗಳೂರು : ನಗರದ ಮಧ್ಯ ಭಾಗದಲ್ಲಿರುವ ಗರುಡಾ ಮಾಲ್‌ ಮೇಲೆ ಬಿಬಿಎಂಪಿ ೨೦೦೦೦ ರೂ ದಂಡ ವಿಧಿಸಲಾಗಿದೆ. ಕೋವಿಡ್‌ ಸಂಬಂಧ ಸರ್ಕಾರ ವಿಧಿಸಿರುವ ನಿಯಮಗಳನ್ನು ಗರುಡ ಮಾಲ್‌ ಪಾಲಿಸದ ಕಾರಣ ಬಿಬಿಎಂಪಿ ದಂಡ ವಿಧಿಸಿದೆ.

ಮಾಲ್‌ ಅಥವಾ ಥಿಯೇಟರ್‌ಗೆ ಪ್ರವೇಶ ಪಡೆಯಬೇಕು ಎಂದರೆ ಕೋವಿಡ್‌ ಲಸಿಕೆ ಹಾಕಿಸುವುದು ಖಡ್ಡಾಯ ಮಾಡಿದೆ. ಆ ಸರ್ಟಿಫಿಕೇಟ್‌ ಅನ್ನು ತೊರಿಸಿ ಪ್ರವೇಶ ಪಡೆಯಬೇಕಿತ್ತು. ಆದರೆ ಗರುಡ ಮಾಲ್‌ನಲ್ಲಿ ಈ ರೀತಿಯ ಯಾವುದೇ ತಪಾಸಣೆ ನಡೆಯುತ್ತಿರಲಿಲ್ಲ ಎಂದು ಅಧಿಕಾರಿಗಳು ಸಲ್ಲಿಸಿರುವ ರಿಪೊರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ. ಎ.ಎಸ್. ಬಾಲಸುಂದರ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಲ್​ಗಳಿಗೆ ಭೇಟಿ ನೀಡುವವರು ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಎಂಬುದನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ಕೆಲವು ವಾರಗಳ ಹಿಂದೆ ಎಲ್ಲ ಮಾಲ್‌ಗಳಿಗೆ ತೋರಿಸಲಾಗಿದೆ. ಈ ತಪಾಸಣೆ ಮಾಡಲು ಒಬ್ಬ ವ್ಯಕ್ತಿಗೆ ಕೇವಲ ಒಂದು ನಿಮಿಷ ಸಾಕಾಗುತ್ತದೆ. ಆದರೆ, ಗರುಡಾ ಮಾಲ್ ಸಿಬ್ಬಂದಿ ಈ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಹಾಗಾಗಿ ದಂಡ ವಿಧಿಸಿದ್ದೇವೆ ಎಂದು ತಿಳಿಸಿದ್ದಾರೆ.

Share Post