Bengaluru

ನೈಟ್‌ ಕರ್ಫ್ಯೂ: ಪ್ರಮುಖ ರಸ್ತೆಯಲ್ಲಿ ಪೊಲೀಸ್‌ ಹದ್ದಿನಕಣ್ಣು

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ೧೦ ದಿನಗಳ ಕಾಲ ನೈಟ್‌ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೫ ಗಂಟೆಯವರೆಗೆ ನೈಟ್‌ ಕರ್ಫ್ಯೂ ಇರುತ್ತೆ. ಹೀಗಾಗಿ ಪ್ರಮುಖ ರಸ್ತೆಯಲ್ಲಿ ಪೊಲೀಸ್‌ ಹದ್ದಿನಕಣ್ಣು ಇಡಲಿದೆ. ಏರಿಯಾಗಳಲ್ಲಿ ಪೊಲೀಸ್‌ ರೌಂಡ್ಸ್‌ ಹಾಕಲಿದ್ದಾರೆ, ಹೀಗಾಗಿ ನಗರದಲ್ಲಿ ಸುಖಾಸುಮ್ಮನೆ ಓಡಾಟ ಮಾಡುವರಿಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಸಮಯದಲ್ಲಿ ಓಡಾಟ ನಡೆಸಲು ಯಾವುದೇ ಪಾಸ್‌ ನೀಡೋದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ನೈಟ್‌ ಯಾರು ಓಡಾಡುವಂತಿಲ್ಲ, ಒಂದು ವೇಳೆ ಊರಿಗೆ ಹೋಗುವ ಜನರು ಬಸ್‌ ಮತ್ತು ಟ್ರೈನ್‌ ಟಿಕೆಟ್‌ ತೋರಿಸಿದವರಿಗೆ ಮಾತ್ರ ಅವಕಾಶವಿರುತ್ತದೆ. ಇದರಂತೆ ಬಸ್‌, ಕ್ಯಾಬ್‌ ಸೇವೆಯೂ ಇರುತ್ತದೆ. ಆದರೆ ಎಲ್ಲ ಭಾಗದಲ್ಲೂ ನಾಕಾಬಂದಿ ಮಾಡಿ ಬಂದ್‌ ಮಾಡುತ್ತೇವೆ ಎಂದರು. ಅಲ್ಲಲ್ಲಿ ಪ್ಯಾಟ್ರೋಲಿಂಗ್‌ ಇರುತ್ತದೆ. ಹೀಗಾಗಿ ಒಂದು ವೇಳೆ ನಿಯಮ ಉಲ್ಲಂಘಿಸಿದದ ವಿರುದ್ಧ ಎನ್ ಡಿಎಂಎ ಕೇಸ್‌ ದಾಖಲಾಗುತ್ತದೆ. ಆಸ್ಪತ್ರೆ ಹೋಗುವವರು ದಾಖಲೆ ತೋರಿಸಬೇಕು. ನಾವು ಯಾವುದೇ ಪಾಸ್‌ ಕೊಡೊಲ್ಲ ಎಂದು ಹೇಳಿದರು.
ಇನ್ನು ಹೊಸವರ್ಷದ ದಿನವೂ ಕ್ರಮ ಕೈಗೊಳ್ಳುತ್ತೇವೆ. ಇಂದಿರಾನಗರ, ಕೋರಮಂಗಲ, ಎಂ.ಜಿ ರೋಡ್‌ , ಬ್ರಿಗೇಡ್‌ ರಸ್ತೆಯಲ್ಲಿ ಜನರನ್ನು ಓಡಾಡುವುದಕ್ಕೆ ಬಿಡುವುದಿಲ್ಲ. ಜೊತೆಗೆ ಪಬ್‌ , ರೆಸ್ಟೋರೆಂಟ್‌ ಗಳೆಲ್ಲ ಹತ್ತು ಗಂಟೆಗೆ ಮುಚ್ಚಬೇಕು. ತುರ್ತು ಕೆಲಸ ಇರುವವರು ಬಿಟ್ಟರೆ ಯಾರು ಹೊರಗೆ ಬರುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Share Post