ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗ್ಶೇಖರ್
ಬೆಂಗಳೂರು : ಸಿನಿಮಾ ನಿರ್ದೇಶಕರಾದ ನಾಗಶೇಖರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮನೆ ಖರೀದಿ ವಿಚಾರದಲ್ಲಿ ವಂಚಿಸಿದ ಆರೋಪದ ಮೇಲೆ ಮಹಿಳೆ ಮೇಲೆ ದೂರು ದಾಖಲಿಸಿದ್ದಾರೆ.
ಆರ್ ಆರ್ ನಗರದಲ್ಲಿ ನಾಗಶೇಖರ್ ಮನೆ ಖರೀದಿಸಲು ನಿರ್ಧರಿಸಿದ್ದರು. ಮೀನಾ ಎಂಬುವವರ ಮನೆ ಖರೀದಿ ಮಾಡಲು ಒಪ್ಪಿಕೊಂಡಿದ್ದ ನಾಗಶೇಖರ್ ೨.೭೦ ಕೋಟಿಗೆ ಡೀಲ್ ಮಾಡಿಕೊಂಡಿದ್ದರು.
ಮನೆಯನ್ನು ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದ ನಾಗಶೇಖರ್ ಹಂತ ಹಂತವಾಗಿ ೫೦ ಲಕ್ಷರೂ ಮೊತ್ತವನ್ನು ಮೀನಾ ಅವರ ಖಾತೆಗೆ ಜಮಾ ಮಾಡಿದ್ದರು. ಆದರೆ ಮೀನಾ ಅವರು ಇನ್ನೊಬ್ಬರಿಗೆ ಮನೆ ಮಾರಾಟ ಮಾಡಿದ್ದಾರೆ. ಕೊಟ್ಟ ಅಡ್ವಾನ್ಸ್ ಅಮೌಂಟ್ ಅನ್ನು ನಾಗಶೇಖರ್ ಕೇಳಿದ್ದಾರೆ. ತುಂಬಾ ದಿನಗಳ ಸತಾಯಿಸಿ ಹಣ ಕೊಡದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಮೀನಾ ಅವರು ಕಣ್ಮರೆಯಾಗಿದ್ದಾರೆ. ಪೊಲೀಸರು ಶೋಧ ಕಾರ್ಯ ಶುರು ಮಾಡಿದ್ದಾರೆ.