ಕ್ರಿಕೆಟ್‌ನಿಂದ ಸ್ಪಿನ್ನರ್ ಹರಭಜನ್ ಸಿಂಗ್ ನಿವೃತ್ತಿ
ನವದೆಹಲಿ: ಟೀಂ ಇಂಡಿಯಾ ಸ್ಪಿನ್ ಬೌಲರ್ ಹರಭಜನ್ ಸಿಂಗ್ ಎಲ್ಲ ಪ್ರಕಾರದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವಟಿರ್‌ನಲ್ಲಿ ಅವರು ವಿಡಿಯೋ ಸಂದೇಶ ನೀಡಿದ್ದಾರೆ. ನನ್ನ 23 ವರ್ಷಗಳ ಸುದೀರ್ಘ ಕ್ರಿಕೆಟ್ ಪ್ರಯಾಣದಲ್ಲಿ ನನಗೆ ಎಲ್ಲವೂ ಸಿಕ್ಕಿದೆ. ನನ್ನ ಬದುಕಿನ ಭಾಗವೇ ಆಗಿರುವ ಕ್ರಿಕೆಟ್‌ಗೆ ವಿದಾಯ ಹೇಳುವ ಕಾಲ ಬಂದಿದೆ ಎಂದು ಅವರು ಹೇಳಿದ್ದಾರೆ.
1998ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಹರಭಜನ್ ಸಿಂಗ್, ಟೀಂ ಇಂಡಿಯಾದ ಹಲವಾರು ಗೆಲುವುಗಳಿಗೆ ಕಾರಣರಾಗಿದ್ದಾರೆ. ಈಡನ್ ಗಾರ್ಡನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹರಭಜನ್ ಸಿಂಗ್ ಭಾರತದ ಪರ 103 ಟೆಸ್ಟ್, 236 ಏಕದಿನ ಹಾಗೂ 28 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದಾರೆ.