ಇನ್ಸ್ಟಾಗ್ರಾಂನಲ್ಲಿ ಹೆಸರು ಬದಲಾವಣೆ – ಕಾರಣ ತಿಳಿಸಿದ ಪ್ರಿಯಾಂಕ ಚೋಪ್ರಾ
ಪ್ರಿಯಾಂಕ ಚೋಪ್ರಾ ಸಾಕಷ್ಟು ಬಿಜಿ ಇರುವ ನಟಿ. ಇತ್ತೀಚೆಗೆ ಇವರು ವಿಚ್ಛೆದನ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದರು. ಪ್ರಿಯಾಂಕ ಮದುವೆ ಆಗಿರೋದು ಪಾಪ್ ಸಿಂಗರ್ ನಿಕ್ ಜೋನಾಸ್ ಅವರನ್ನು. ಮದುವೆಯ ನಂತರ ತಮ್ಮ ಇನ್ಸ್ಟಾ ಖಾತೆಯಲ್ಲಿ ಪ್ರಿಯಾಂಕ ಜೊತೆಗೆ ಜೋನಸ್ ಅನ್ನು ಸೇರಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಇದನ್ನು ಬದಲಿಸಿದ್ದರು. ಹೆಸರಿನ ಮುಂದೆ ಇದ್ದ ಜೋನಸ್ ಅನ್ನು ತೆಗೆದು ಹಾಕಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಪ್ರಿಯಾಂಕ ವಿಚ್ಛೇದನ ಕೊಡಲಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಿದರು. ಇದು ಸಿಕ್ಕಾಪಟ್ಟೆ ವೈರಲ್ ಕೂಡ ಆಯ್ತು.
ಈ ವಿಚಾರ ಬಗ್ಗೆ ತಲೆಕಡಿಸಿಕೊಳ್ಳದ ಪ್ರಿಯಾಂಕ ಸುಮ್ಮನಿದ್ದರು. ಈಗ ಅದರ ಬಗ್ಗೆ ಮೌನ ಮುರಿದಿದ್ದಾರೆ. ಟ್ವಿಟರ್ ಮತ್ತು ಇನ್ಸ್ಟಾ ಖಾತೆಯಲ್ಲಿ ಒಂದೇ ರೀತಿ ಹೆಸರು ಇರಲಿ ಎಂಬ ಕಾರಣಕ್ಕೆ ಹೆಸರು ಬದಲಿಸಿದ್ದೇನೆ ಹೊರತು ಮತ್ಯಾವ ಕಾರಣದಿಂದಲೂ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ನಿಜಕ್ಕೂ = ನನಗೆ ಹಾಸ್ಯಾಸ್ಪದ ಎನಿಸಿತ್ತು. ಅದು ಕೇವಲ ಸೋಶಿಯಲ್ ಮೀಡಿಯಾ ಎಂದು ಪ್ರಿಯಾಂಕ ಹೇಳಿದ್ದಾರೆ.