ಆದಿತ್ಯ ಠಾಕ್ರೆಗೆ ಬೆದರಿಕೆ ಸಂದೇಶ : ಬೆಂಗಳೂರಿನ ವ್ಯಕ್ತಿಯ ಬಂಧನ
ಬೆಂಗಳೂರು : ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಗೆ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಎಂಬ ಆರೋಪದಡಿ ಬೆಂಗಳೂರಿನ ವ್ಯಕ್ತಿ ಒಬನನ್ನು ಬಂಧಿಸಲಾಗಿದೆ. ಬಂಧಿತನ ಹೆಸರು ಜೈಸಿಂಗ್ ರಜಪೂತ್ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ಮುಕ್ಯಮಂತ್ರಿ ಆಗಿರುವ ಉದ್ದವ್ ಠಾಕ್ರೆ ಅವರ ಪುತ್ರನಾಗಿರುವ ಆದಿತ್ಯ ಠಾಕ್ರೆಗೆ ಕಳೆದ ಡಿಸೆಂಬರ್ ೮ರಿಂದ ಸತತವಾಗಿ ಒಂದು ನಂಬರ್ ಇಂದ ಕರೆ ಬರುತ್ತಿತ್ತು. ಆದರೆ ಆದಿತ್ಯ ಅವರು ಫೋನ್ ರಿಸೀವ್ ಮಾಡಿಲ್ಲ. ಕೋಪಗೊಂಡ ಯುವಕ ಬೆದರಿಕೆ ಮೆಸ್ಸೇಜ್ಗಳನ್ನು ಕಳುಹಿಸಲು ಶುರು ಮಾಡಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ ಈ ನಂಬರ್ ಯಾರದೆಂದು ಪೊಲೀಸರು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವುದು ಗೊತ್ತಾಗಿ ಮಹಾರಾಷ್ಟ್ರ ಪೊಲೀಸರು ಒಂದು ತಂಡ ರಚಿಸಿ ಆ ಹುರುಗನನ್ನು ಬಂಧಿಸಿ ಕರೆದೊಯ್ದಿದ್ದಾರೆ. ವಿಚಾರಣೆಯ ನಂತರ ಅವನು ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿ ಎಂದು ತಿಳಿದು ಬಂದಿದೆ.