Politics

ಗುಜರಾತ್‌ ಕರಡು ಪ್ರತಿಗೂ ಇದಕ್ಕೂ ವ್ಯತ್ಯಾಸವೇ ಇಲ್ಲ; ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಳಗಾವಿ: ರಾಜ್ಯ ಸರ್ಕಾರ ಮಂಡಿಸಿರುವ ಮತಾಂತರ ನಿಷೇಧ ಕಾಯ್ದೆ ಕರಡು ಪ್ರತಿಯಲ್ಲಿರುವ ಅಂಶಗಳಿಗೂ, ಗುಜರಾತ್‌ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಜಾರಿಗೆ ತಂದಿರುವ ಕಾನೂನಿನ ಕರಡಿನ ಪ್ರತಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ಕರಡು ರಚನೆಯ ಹಿಂದೆ ಕಾಣದ ಕೈ ಕೈವಾಡವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಇತರೆ ರಾಜ್ಯಗಳ ಕಾನೂನನ್ನೇ ಯಥಾವತ್ತಾಗಿ ಇಲ್ಲಿ ಮಂಡನೆ ಮಾಡಿದೆ. ಪ್ರತಿಯೊಂದ ರಾಜ್ಯದ ಪರಿಸ್ಥಿತಿಗಳೇ ಬೇರೆ ಇರುತ್ತವೆ. ಆಯಾ ರಾಜ್ಯದ ಪರಿಸ್ಥಿತಿಯನ್ನು ನೋಡಿಕೊಂಡು ಕಾನೂನು ರಚನೆ ಮಾಡಬೇಕಾಗುತ್ತದೆ. ಆದರೆ, ರಾಜ್ಯ ಸರ್ಕಾರ, ಗುಜರಾತ್‌ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಅಳವಡಿಸಿಕೊಂಡಿರುವ ಕಾನೂನು ಕರಡು ಪ್ರತಿಯನ್ನೇ ಇಲ್ಲಿ ಮಂಡಿಸಲಾಗಿದೆ ಎಂದು ಸಿದ್ದರಾಮಯ್ಯ ದೂರಿದರು.

Share Post