ಬಾಂಗ್ಲಾದೇಶದ ಗಡಿಯಲ್ಲಿ ಎರಡೂವರೆ ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
ಮುರ್ಷಿದಾಬಾದ್: ಇಲ್ಲಿನ ಖಾದ್ವಾ ಔಟ್ ಪೋಸ್ಟ್ ಬಳಿ 1.2 ಕೆಜಿ ತೂಕ ಹೆರಾಯಿನ್ನ್ನು ಸಿಆರ್ಪಿಎಫ್ ಯೋಧರು ವಶಪಡಿಸಿಕೊಂಡಿದ್ದಾರೆ. ಬಾಂಗ್ಲಾದೇಶ ಗಡಿಯ ಬಳಿಯೇ ಈ ಡ್ರಗ್ಸ್ ಪತ್ತೆಯಾಗಿದೆ. ಬಾಂಗ್ಲಾ-ಭಾರತ ಗಡಿಯ ಸನಿಹದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಟ್ಟಿದ್ದ ಡ್ರಗ್ಸ್ ಸಿಆರ್ಪಿಎಫ್ ಯೋಧರಿಗೆ ಸಿಕ್ಕಿದೆ. ಬಾಂಗ್ಲಾದೇಶದ ಗಡಿಯಿಂದ ಭಾರತದ ಗಡಿಯೊಳಗೆ ಈ ಹೆರಾಯಿನ್ ಪಾಕೆಟ್ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ಡ್ರಗ್ಸ್ ರವಾನೆಯಾಗುತ್ತಿದ್ದು, ಈ ಮಾಹಿತಿ ಅರಿತ ಸಿಎಆರ್ಪಿಎಫ್ ಯೋಧರು ಸ್ಥಳಕ್ಕಾಗಮಿಸಿದಾಗ ಈ ಪಾಕೆಟ್ ಪತ್ತೆಯಾಗಿದೆ. ಈ ಹೆರಾಯಿನ್ ಬೆಲೆ ಮಾರುಕಟ್ಟೆಯಲ್ಲಿ ಎರಡೂವರೆ ಕೋಟಿಗೂ ಹೆಚ್ಚಿದೆ ಎಂದು ಹೇಳಲಾಗಿದೆ. ವಶಪಡಿಸಿಕೊಳ್ಳಲಾದ ಡ್ರಗ್ಸ್ನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.