National

ಇ.ಡಿ ಮುಂದೆ ಐಶ್ವರ್ಯ ಹಾಜರ್

ನವದೆಹಲಿ : ಪನಾಮ ಪೇಪರ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಐಶ್ವರ್ಯ ರೈ ಬಚ್ಚನ್‌ ಅವರು ದೆಹಲಿಯ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ.

ಈ ಹಿಂದೆ ಎರಡು ಬಾರಿ ಸಮನ್ಸ್‌ ಜಾರಿ ಮಾಡಿದಾಗಲೂ ಐಶ್ವರ್ಯ ಗೈರಾಗಿದ್ದರು. ಈ ಬಾರಿ ಸಮನ್ಸ್‌ ಜಾರಿ ಆದ ಕೂಡಲೇ ಐಶ್ವರ್ಯ ಪ್ರತ್ಯಕ್ಷರಾಗಿದ್ದಾರೆ.

ಪನಾಮಾ ಪೇಪರ್ಸ್‌ ಬಹಿರಂಗ ಪಡಿಸಿದ ಪಟ್ಟಿಯಲ್ಲಿ ೫೦೦ ಭಾರತೀಯರ ಹೆಸರುಗಳಿವೆ.

ಈ ವಿಚಾರವಾಗಿ ಹೇಳಿಕೆ ನೀಡಿದ್ದ ಐಶ್ವರ್ಯ ಇದೆಲ್ಲಾ ಸುಳ್ಳು ಎಂದಿದ್ದರು.

Share Post