ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ಮಹಿಳೆ!
ಬೆಂಗಳೂರು; ಸಾಮಾಜಿಕ ಜಾಲತಾಣಗಳು ಹೆಚ್ಚು ಜನಪ್ರಿಯವಾದಂತೆ ಮಹಿಳಾ ಕೊಲೆಗಡುಕರ ಸಂಖ್ಯೆ ಹೆಚ್ಚಾಗುತ್ತಿದೆ.. ಇದಕ್ಕೆ ಉದಾಹರಣೆ ಈ ಸ್ಟೋರಿ.. ಬೆಂಗಳೂರಿನಲ್ಲಿ ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಲೆ ಮಾಡಿ ನಾಟಕ ಮಾಡಿದ್ದಾಳೆ..
ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಭೋಗನಹಳ್ಳಿ ಕೆರೆ ಬಳಿ ಈ ಘಟನೆ ನಡೆದಿದೆ.. ಭೋಗನಹಳ್ಳಿ ಕೆರೆ ಬಳಿಯ ಲೇಬರ್ ಶೆಡ್ ನಲ್ಲಿ ವಾಸವಿದ್ದ ಪತಿ ತಿಪ್ಪೇಶ ಕೊಲೆಯಾದವರು. ಪತ್ನಿ ನಾಗರತ್ನ ಕೊಲೆ ಮಾಡಿದ ಪತ್ನಿ.. ಇವರಿಗೆ ಇಬ್ಬರು ಮಕ್ಕಳಿದ್ದು, ಅನಾಥರಾಗಿದ್ದಾರೆ..
ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ನಾಗರತ್ನ, ಪ್ರಿಯಕರನ ಜೊತೆ ಸೇರಿ ತೋಪಿನಲ್ಲಿ ಗಂಡನನ್ನು ಕೊಲೆ ಮಾಡಿದ್ದಾಳೆ.. ನಂತರ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾಳೆ.. ಆದ್ರೆ ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ನಿಜ ವಿಷಯ ಗೊತ್ತಾಗಿದೆ..