CrimeDistricts

ಅತ್ತೆಯನ್ನೇ ಬಡಿದು ಕೊಲೆ ಮಾಡಿದ ಸೊಸೆ!

ತುಮಕೂರು; ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತುಮಕೂರು ತಾಲೂಕಿನ ಕಲ್ಲುಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ..

ಕೆಂಪಮ್ಮ ಕೊಲೆಯಾದ ಅತ್ತೆಯಾಗಿದ್ದಾರೆ.. ಸೊಸೆ ಉಮಾದೇವಿ ಕೊಲೆ ಮಾಡಿದ ಆರೋಪಿ. ಉಮಾದೇವಿ ತನ್ನ ಸಹೋದರಿಗೆ ಪೋನ್ ಪೇ ಮೂಲಕ 7 ಸಾವಿರ ಹಣ ಕಳಿಸಿದ್ದಳು.ಹಣ ಕಳಿಸಿದ್ದ ಬಗ್ಗೆ ಮಗ ರಾಜೇಶ್ ಗೆ ಬಳಿ ದೂರು ಹೇಳಿದ್ದ ಕೆಂಪಮ್ಮ.

ಹಣ ಯಾಕೆ ಕಳಿಸಿದ್ದಿಯಾ ಅಂತಾ ಉಮಾದೇವಿ ಮೇಲೆ ಜಗಳ ಮಾಡಿದ್ದ ಪತಿ ರಾಜೇಶ್.ಹಣ ಕಳಿಸಿದ್ದನ್ನ ಹೇಳಿ ಜಗಳ ಮಾಡಿಸಿದ್ದಿಯಾ ಎಂದು ಅತ್ತೆಯ ಕೈ ಹಾಗೂ ಕಾಲುಗಳಿಗೆ ದೊಣ್ಣೆಯಿಂದ ಥಳಿತ.ಕೈಕಾಲುಗಳಿಗೆ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು.

ಹಲ್ಲೆ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿ ಮನೆಗೆ ವಾಪಸ್ ಕರೆದುಕೊಂಡು ಬರಲಾಗಿತ್ತು.ಮನೆಗೆ ಬಂದ ಬಳಿಕ ಮೃತರಾಗಿರುವ ಅತ್ತೆ ಕೆಂಪಮ್ಮ.ಸ್ಥಳಕ್ಕೆ ಎಸ್ ಪಿ ಅಶೋಕ್ ವೆಂಕಟ್ ಭೇಟಿ ಪರಿಶೀಲನೆ.ಆರೋಪಿ ಉಮಾದೇವಿಯನ್ನ ವಶಕ್ಕೆ ಪಡೆದ ಪೊಲೀಸರು.ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Share Post