BengaluruPolitics

ಚನ್ನಪಟ್ಟಣಕ್ಕೆ ಅನುಸೂಯ ಮಂಜುನಾಥ್‌ ಮೈತ್ರಿ ಅಭ್ಯರ್ಥಿಯಾಗ್ತಾರಾ..?; ಜೆಡಿಎಸ್‌ ತಂತ್ರವೇನು..?

ಬೆಂಗಳೂರು; ಸಿ.ಪಿ.ಯೋಗೇಶ್ವರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ.. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಕ್ಕೆ ಸಿದ್ಧತೆ ನಡೆಸಿದ್ದಾರೆ.. ಹೀಗಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಯಾರು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ.. ಈ ನಡುವೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಅವರ ಪತ್ನಿ ಹಾಗೂ ದೇವೇಗೌಡ ಮಗಳು ಅನಸೂಯಾ ಮಂಜುನಾಥ್‌ ಅವರ ಹೆಸರು ಇಲ್ಲಿ ಚಾಲ್ತಿಗೆ ಬಂದಿದೆ.. ಜೆಡಿಎಸ್‌ ವೋಟ್‌ ಬ್ಯಾಂಕ್‌, ಸಂಸದ ಮಂಜುನಾಥ್‌ ಅವರ ಕ್ಲೀನ್‌ ಇಮೇಜ್‌ ಹಾಗೂ ಮಹಿಳಾ ಮತಗಳನ್ನು ದೃಷ್ಟಿಯಲ್ಲಿಟ್ಟುಕೊಂಡ ಅನಸೂಯಾ ಅವರನ್ನು ಕಣಕ್ಕಿಳಿಸೋ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ..
ಡಾ.ಮಂಜುನಾಥ್‌ ಅವರ ಪತ್ನಿ ಹಾಗೂ ದೇವೇಗೌಡರ ಮಗಳಾಗಿರುವುದರಿಂದ ಅನಸೂಯಾ ಅವರಿಗೆ ಜನ ಬೆಂಬಲ ಸಿಗಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.. ಇಷ್ಟು ದಿನ ನಿಖಿಲ್‌ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಯುತ್ತಿತ್ತು.. ಆದ್ರೆ ಯೋಗೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿಯಾದ ಮೇಲೆ ಜೆಡಿಎಸ್‌ ರಣತಂತ್ರ ಬದಲಿಸುವ ಸಾಧ್ಯತೆ ಇದೆ.. ಈ ನಡುವೆ ದೇವೇಗೌಡರು ನಿಖಿಲ್‌ಗೆ ಬುಲಾವ್‌ ನೀಡಿ ಮಾತುಕತೆ ನಡೆಸುತ್ತಿದ್ದಾರೆ.. ಈ ನಡುವೆ ಅನಸೂಯಾ ಅವರ ಹೆಸರು ಚರ್ಚೆಗೆ ಬಂದಿದೆ.. ಆದ್ರೆ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಅವರು ಮಾತ್ರ ಅನುಸೂಯಾ ಅವರು ಸ್ಪರ್ಧೆ ಮಾಡೋದಿಲ್ಲ ಎಂದು ಹೇಳುತ್ತಿದ್ದಾರೆ.. ಆದ್ರೆ ಕೊನೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು.. ಇಂದು ರಾತ್ರಿವರೆಗೂ ಆಗುವ ಬೆಳವಣಿಗೆಗಳು ಮಾತ್ರ ಕುತೂಹಲ ಕೆರಳಿಸುತ್ತಿವೆ..
ಕುಟುಂಬದಲ್ಲೇ ಯಾರನ್ನಾದರೂ ಕಣಕ್ಕಿಳಿಸುವುದೇ ಅಥವಾ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.. ಒಂದು ಕುಟುಂಬದವರು ಬೇಡ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸೋಣ ಎಂಬ ಚರ್ಚೆ ಎದುರಾದರೆ ಚನ್ನಪಟ್ಟಣ ತಾಲೂಕು ಘಟಕದ ಜೆಡಿಎಸ್ ಅಧ್ಯಕ್ಷ ಜಯಮುತ್ತು ಅವರ ಹೆಸರು ಮುಂಚೂಣಿಯಲ್ಲಿದೆ.. ಒಟ್ಟಿನಲ್ಲಿ ಯೋಗೇಶ್ವರ್‌ ಕಾಂಗ್ರೆಸ್‌ ಸೇರಿದ್ದರಿಂದ ಜೆಡಿಎಸ್‌ ಹೊಸ ತಂತ್ರಗಾರಿಕೆ ಹೆಣೆಯುತ್ತಿದೆ.. ಸಂಜೆ ವೇಳೆ ಜೆಡಿಎಸ್‌ ನಿರ್ಧಾರ ಏನು ಅನ್ನೋದು ಸ್ಪಷ್ಟ ಚಿತ್ರಣ ಸಿಗಲಿದೆ.. ಸಂಜೆ ಏಳು ಗಂಟೆಗೆ ದೇವೇಗೌಡರೇ ಖುದ್ದಾಗಿ ತಮ್ಮ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆ..

Share Post