ಕಟ್ಟಡ ಕುಸಿತದಿಂದ 6 ಕಾರ್ಮಿಕರ ಸಾವು!; ಮಾಲೀಕ ಅರೆಸ್ಟ್!
ಬೆಂಗಳೂರು; ಭಾರಿ ಮಳೆಯಿಂದಾಗಿ ನಿನ್ನೆ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದುಬಿದ್ದಿತ್ತು.. ಅದರಡಿ ಸಿಲುಕಿದ್ದ ಕಾರ್ಮಿಕರ ಸಾವಿನ ಸಂಖ್ಯೆ ಆರಕ್ಕೇರಿದೆ.. ನಿನ್ನೆಯೇ ಐದು ಮಂದಿ ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಇಂದು ಮತ್ತೆ ಒಂದು ಮೃತದೇಹ ಸಿಕ್ಕಿದೆ.. ಘಟನೆ ಸಂಬಂಧ ಪೊಲೀಸರು ಕಟ್ಟಡದ ಮಾಲೀಕ ಭುವನ್ ರೆಡ್ಡಿ ಹಾಗೂ ಗುತ್ತಿಗೆದಾರ ಮುನಿಯಪ್ಪ ಎಂಬುವವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ..
ಕಟ್ಟಡದ ಮಾಲೀಕ ಭುವನ್ ರೆಡ್ಡಿ ಆಂಧ್ರಪ್ರದೇಶ ಮೂಲದವರಾಗಿದ್ದಾರೆ.. ಇವರು ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರು.. ಆದ್ರೆ ಆರು ಮಹಡಿಯ ಕಟ್ಟಡ ಕಟ್ಟಿಸಲಾಗುತ್ತಿತ್ತು.. ಸರಿಯಾದ ಪ್ಲ್ಯಾನ್ ಇಲ್ಲದೆ, ಅನುಮತಿ ಪಡೆಯದೇ, ಅಕ್ರಮವಾಗಿ ಹಾಗೂ ಕಳಪೆ ಕಾಮಗಾರಿ ನಡೆಸಿದ್ದರಿಂದಲೇ ಈ ದುರಂತ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ…
ಬಿಹಾರ ಮೂಲದ ಕಾರ್ಮಿಕ ಮೊಹಮ್ಮದ್ ಸಾಹಿಲ್, ತಿರುಪಾಲಿ, ಅರ್ಮಾನ್, ಶಂಕರ್, ಸತ್ಯರಾಜ್, ಸೋಲೋ ಪಾಸ್ವಾನ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.. ಇದುವರೆಗೂ 13 ಜನ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.. ಇನ್ನೂ ಕೂಡಾ ಕಾರ್ಯಾಚರಣೆ ನಡೆಯುತ್ತಿದೆ.. ಎಂಟು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, ತಳಪಾಯಕ್ಕ ಹಾಕಿರುವ ಕಂಬಿ ಕಳಪೆಯಾದ್ದಾಗಿದ್ದು, ಜೊತೆಗೆ ಕಾಂಪೌಂಡ್ ನಿರ್ಮಾಣಕ್ಕೆ ಅಗೆಯಲಾಗಿದ್ದ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿದ್ದರಿಂದ ಭೂಮಿ ಸಡಿಲವಾಗಿ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ..