International

ಫುಟ್ಬಾಲ್‌ ಸ್ಟೇಡಿಯಂನಲ್ಲಿ ಗೊಂಬೆಗಳ ಸುರಿಮಳೆ: ಮನಮೋಹಕ ದೃಶ್ಯ

ಸ್ಪೇನ್:‌ ಸ್ಟೇಡಿಯಂಗಳಲ್ಲಿ ಆಟ ಮಾತ್ರ ಆಡೋದನ್ನು ನಾವು ನೋಡಿದ್ವಿ ಆದ್ರೆ ಇಲ್ಲೊಂದು ಸ್ಟೇಡಿಯಂನಲ್ಲಿ ಆಟದ ಜೊತೆಗೆ ಗೊಂಬೆಗಳನ್ನೂ ಕಾಣಬಹುದು. ಅಂದ್ರೆ ಪ್ರೇಕ್ಷಕರು ಫುಟ್ಬಾಲ್‌ ಆಟ ನೋಡುವಾಗ ತಾವು ತಂದಿರುವ ಗೊಂಬೆಗಳನ್ನು ಮೈದಾನಕ್ಕೆ ಎಸೆಯುತ್ತಾರೆ. ಅರೆ ಇದೇನಪ್ಪಾ ಯಾಕ್‌ ಹೀಂಗೆಲ್ಲ ಮಾಡ್ತಾರೆ ಅಂತ ಯೋಚನೆ ಮಾಡ್ತಿದ್ದೀರಾ..? ಸ್ಪೇನ್‌ನಲ್ಲಿರುವ ಟಾಫ್‌ ಫುಟ್ಬಾಲ್‌ ಸ್ಟೇಡಿಯಂನಲ್ಲಿ ಇದು ಆಚರನೆಯಂತೆ ಪ್ರತಿ ವರ್ಷ ಕ್ರಿಸ್‌ಮಸ್‌ ನಡೆಯುವ ಕೆಲ ವಾರಗಳ ಮೊದಲೇ ಈ ಕ್ರೀಡಾಂಗಣದಲ್ಲಿ ಇಂತಹ ಒಂದು ಮನಮೋಹಕ ಕಾರ್ಯಕ್ರಮ ನಡೆಯುತ್ತಂತೆ. ಇದು ಸುಮಾರು 1935ಇಸವಿಯಿಂದ ನಡೆದುಕೊಂಡು ಬರುತ್ತೆ ಅಂತಾರೆ ಅಲ್ಲಿನವರು. ಕಾರಣ ಇಷ್ಟೆ ಅಭಿಮಾನಿಗಳು ಎಸೆಯುವ ಈ ಬೊಂಬೆಗಳನ್ನು ಫುಟ್ಬಾಲ್‌ ಕ್ಲಬ್‌ನವರು ಕ್ರಿಸ್‌ಮಸ್‌ ಸಮಯದಲ್ಲು ವಿಕಲಾಂಗ ಮಕ್ಕಳಿಗೆ ಗಿಫ್ಟಾಗಿ ಕೊಡ್ತಾರಂತೆ. ಜೀವನದಲ್ಲಿ ತಾವು ಕಳೆದುಕೊಂಡಿರುವ ನಗುವನ್ನು ಮರೆಸುವುದಕ್ಕಾಗಿ ತಮಗಿರುವ ಅಳುಕನ್ನು ಹೋಗಲಾಡಿಸುವುದಕ್ಕಾಗಿ, ವಿಕಲಾಂಗರ ಮೊಗದಲ್ಲಿ ನಗು ತರಿಸುವುದಕ್ಕಾಗಿ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಫುಟ್ಬಾಲ್‌ ಕ್ರೀಡಾಂಗಣ ಆಯೋಜನೆ ಮಾಡಲಾಗುತ್ತದೆ. ಇನ್ನು ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಗೆ ಗೊಂಬೆ ಅಳತೆ, ಆಕಾರ ಹಾನಿಕಾರಕ ಬೆಂಬೆಗಳನ್ನು ತರದಂತೆ ಕೆಲವು ಷರತ್ತುಗಳನ್ನು ಕೂಡ ಈ ಕ್ಲಬ್‌ ವಿಧಿಸಿದೆ.

Share Post