ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಬಸ್ ಮೇಲೆ ಹಾರಿದ ಚಿರತೆ!
ಬೆಂಗಳೂರು; ಬನ್ನೇರುಘಟ್ಟ ಸಫಾರಿ ವೇಳೆ ಚಿರತೆಯೊಂದು ಪ್ರವಾಸಿಗರಿದ್ದು ಮಿನಿ ಬಸ್ ಮೇಲೆ ಹಾರಿದ್ದು, ಇದರಿಂದ ಆತಂಕವನ್ನುಂಟು ಮಾಡಿದ ಘಟನೆ ನಡೆದಿದೆ.. ಪ್ರವಾಸಿಗರು ಮಿನಿ ಬಸ್‌ನಲ್ಲಿ ಕುಳಿತು ಚಿರತೆ ನೋಡಿ ಖುಷಿಪಡುತ್ತಿದ್ದರು.. ಮಿನಿ ಬಸ್ ಪಕ್ಕದಲ್ಲೇ ಓಡಾಡುತ್ತಿದ್ದ ಚಿರತೆ ಇದ್ದಕ್ಕಿದ್ದಂತೆ ಮಿನಿ ಬಸ್ ಕಿಟಕಿ ಮೇಲೆ ಹಾರಿದೆ.. ಇದರಿಂದ ಕೆಲವರು ಆತಂಕಪಟ್ಟರೆ, ಕೆವರು ಖುಷಿಯಿಂದ ನೋಡಿದ್ದಾರೆ..
ಇತ್ತೀಚಿಗೆ ಬೆನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಆರಂಭವಾಗಿದೆ.. ಪ್ರವಾಸಿಗರನ್ನು ತುಂಬಿದ ಮಿನಿ ಬಸ್‌ಗಳ ಬರುತ್ತಿದ್ದಂತೆ ಅವುಗಳ ಪಕ್ಕದಲ್ಲೇ ಚಿರತೆಗಳು ಓಡಾಡುತ್ತಿವೆ.. ಈ ವೇಳೆ ಬಸ್, ಜೀಪ್‌ಗಳ ಮೇಲೆ ಅವು ಏರುವುದು ಮಾಡುತ್ತವೆ.. ಅದೇ ರೀತಿ ಇವತ್ತೂ ಕೂಡಾ ಆಗಿದೆ.. ಅದರ ದೃಶ್ಯಗಳನ್ನು ಬೇರೊಂದು ವಾಹನದಲ್ಲಿದ್ದವರು ಚಿತ್ರೀಕರಿಸಿದ್ದಾರೆ..
ಚಿರತೆ ಹಾರುತ್ತಿದ್ದಂತೆ ಪ್ರವಾಸಿಗರು ಭಯಪಟ್ಟಿದ್ದಾರೆ.. ಹೀಗಾಗಿ ವಾಹನ ಚಾಲಕ ನಿಧಾನಕ್ಕೆ ಮುಂದಕ್ಕೆ ಹೋಗಿದ್ದಾನೆ.. ಆ ಚಿರತೆ ಕೆಳಗೆ ಹಾರಿ ಪಕ್ಕಕ್ಕೆ ಹೋಗಿದೆ.. ಬನ್ನೇರುಘಟ್ಟ ಉದ್ಯಾನದಲ್ಲಿ 19 ಚಿರತೆಗಳಿವೆ.. ಇನ್ನು ಕರಡಿ, ಸಿಂಹ, ಹುಲಿ, ಆನೆಗಳನ್ನು ಕೂಡಾ ನಾವು ಸಫಾರಿ ವೇಳೆ ನೋಡಬಹುದು..