CrimeNational

ಪುಣೆಯಲ್ಲಿ ನಿರ್ಭಯಾ ರೀತಿಯ ಪ್ರಕರಣ; ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ಪುಣೆ (ಮಹಾರಾಷ್ಟ್ರ); ದೆಹಲಿ ನಿರ್ಭಯಾ ಪ್ರಕರಣದ ರೀತಿಯಲ್ಲೇ ಪುಣೆಯಲ್ಲಿ ಒಂದು ಪೈಶಾಚಿತ ಕೃತ್ಯ ನಡೆದಿದೆ.. ಯುವತಿ ಸ್ನೇಹಿತನನ್ನು ಥಳಿಸಿರುವ ದುಷ್ಕರ್ಮಿಗಳು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.. ಮಹಾರಾಷ್ಟ್ರದ ಪುಣೆ ಬಳಿ ಈ ಪೈಶಾಚಿಕ ಕೃತ್ಯ ಎಸಗಲಾಗಿದೆ.. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬೋಪ್‌ದೇವ್‌ ಘರ್‌ ಪ್ರದೇಶದಲ್ಲಿ ಸ್ನೇಹಿತನ ಜೊತೆ ಯುವತಿ ತೆರಳುತ್ತಿದ್ದಳು.. ಈ ವೇಳೆ ಮೂವರು ಅಪರಿಚಿತರು ದಾಳಿ ಮಾಡಿದ್ದು, ಸ್ನೇಹಿತನ ಮೇಲೆ ದಾಳಿ ಮಾಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ..
ಮೂವರೂ ಆರೋಪಿಗಳೂ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.. ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.. ಆರೋಪಿಗಳ ಪತ್ತೆಗೆ 10 ತಂಡಗಳನ್ನು ರಚನೆ ಮಾಡಲಾಗಿದೆ.. ಕೊಂಧ್ವಾ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

Share Post