HealthPolitics

ವಿಧಾನಸಭೆಯ 3ನೇ ಮಹಡಿಯಿಂದ ಹಾರಿದ ಶಾಸಕ!

ಮುಂಬೈ; ಮಹಾರಾಷ್ಟ್ರ ವಿಧಾನಸಭಾ ಕಟ್ಟಡದ ಮೂರನೇ ಮಹಡಿಯಿಂದ ಹಿರಿಯ ಶಾಸಕರೊಬ್ಬರು ಕೆಳಕ್ಕೆ ಹಾರಿದ್ದಾರೆ.. ಇದರಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.. ಆದ್ರೆ ಕಟ್ಟಡದಲ್ಲಿ ಸುರಕ್ಷತಾ ನೆಟ್‌ ಅಳವಡಿಸಿದ್ದರಿಂದ ಅದಕ್ಕೆ ಸಿಕ್ಕಿಕೊಂಡ ಶಾಸಕರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ..
ಮೀಸಲಾತಿ ವಿಚಾರಕ್ಕೆ ಹೋರಾಟ ನಡೆಸಲಾಗುತ್ತಿತ್ತು.. ಈ ವೇಳೆ ಅಜಿತ್‌ ಪವಾರ್‌ ಬಣದ ಶಾಸಕ ನರಹರಿ ಜೀರ್ವಾಲ್‌ ಇದ್ದಕ್ಕಿದ್ದಂತೆ ಮೂರನೇ ಮಹಡಿಯಿಂದ ಹಾರಿದ್ದಾರೆ.. ಇವರು ಮಹಾರಾಷ್ಟ್ರ ವಿಧಾನಸಭೆಯ ಉಪಸ್ಪೀಕರ್‌ ಕೂಡಾ ಆಗಿದ್ದಾರೆ.. ಸೇಫ್ಟಿಗಾಗಿ ಅಳವಡಿಸಿದ್ದ ಪರದೆಯಲ್ಲಿ ಶಾಸಕರು ಸಿಲುಕಿದ್ದರು.. ಅವರನ್ನು ರಕ್ಷಣೆ ಮಾಡಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು.. ಎಸ್ಟಿ ಕೋಟಾದಡಿ ಧಂಗರ್ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ವಿರೋಧಿಸಿ ಅವರು ಈ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ..

Share Post