CrimeNational

ಅಪ್ರಾಪ್ತ ಸಹೋದರಿಯನ್ನು ಗರ್ಭಿಣಿ ಮಾಡಿದ ಸ್ವಂತ ಸಹೋದರ!

ಸೂರತ್‌(ಗುಜರಾತ್‌); ಅವನು ಅಪ್ರಾಪ್ತ ಬಾಲಕ.. ಆತನ ಸಹೋದರಿ ಕೂಡಾ ಆತನಿಗಿಂತ ಕಿರಿಯವಳು.. 16 ವರ್ಷದ ಬಾಲಕ 13 ವರ್ಷದ ತನ್ನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದಾನೆ.. ಇದರಿಂದಾಗಿ ಅಣ್ಣನಿಂದಲೇ ಅಪ್ರಾಪ್ತ ಸಹೋದರಿ ಗರ್ಭಿಣಿಯಾಗಿದ್ದಾಳೆ.. ಗುಜರಾತ್‌ ರಾಜ್ಯದ ಸೂರತ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ..
13 ವರ್ಷದ ಬಾಲಕಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದೆ.. ಇದರಿಂದಾಗಿ ಬಾಲಕಿಯ ತಾಯಿ ಸಮೀಪವಿರುವ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಮೂರು ತಿಂಗಳ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದಾರೆ.. ಇದರಿಂದಾಗಿ ಪೋಷಕರು ಶಾಕ್‌ಗೆ ಒಳಗಾಗಿದ್ದಾರೆ.. ಇದಕ್ಕೆ ಕಾರಣ ಯಾರು ಎಂದು ಪೋಷಕರು ಪ್ರಶ್ನೆ ಮಾಡಿದಾಗ ಆಕೆ ತನ್ನ ಅಣ್ಣನ ಕಡೆ ಬೆಟ್ಟು ತೋರಿಸಿದ್ದಾಳೆ..
ತನ್ನ ಅಣ್ಣ ತನ್ನ ಜೊತೆ ಲೈಂಗಿಕ ಸಂಬಂಧ ಹೊಂದುವಂತೆ ಕರೆದನಂತೆ.. ಆದ್ರೆ ಅದಕ್ಕೆ ಬಾಲಕಿ ನಿರಾಕರಿಸಿದ್ದಾಳೆ.. ಆದ್ರೆ ಸಹೋದರ ಆಕೆಯ ಮೇಲೆ ಬಲವಂತವಾಗಿ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ.. ಈ ವಿಚಾರ ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಆಕೆಗೆ ಬೆದರಿಸಿದ್ದನಂತೆ.. ಹೀಗಾಗಿ ಬಾಲಕಿ ಕೊಲೆಯಾಗುವ ಭಯದಿಂದ ಯಾರಿಗೂ ಹೇಳದೇ ಸುಮ್ಮನಾಗಿದ್ದಾಳೆ.. ಇದೀಗ ಆಕೆ ಅಣ್ಣನಿಂದಲೇ ಗರ್ಭಿಣಿಯಾಗಿದ್ದಾಳೆ..
ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.. ಈ ವೇಳೆ ಸ್ವಂತ ಅಣ್ಣನೇ ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.. 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಹೊಟ್ಟೆನೋವೆಂದಾಗ ಆಸ್ಪತ್ರೆಗೆ ಹೋದಾಗಲೇ ವಿಷಯ ಏನು ಅನ್ನೋದು ಗೊತ್ತಾಗಿದೆ..

Share Post