CrimeDistricts

ಸಿದ್ದರಾಮಯ್ಯ ವಿರುದ್ಧ FIR; ಸಿದ್ದರಾಮಯ್ಯ A1, ಪತ್ನಿ A2

ಮೈಸೂರು; ಮುಡಾದಲ್ಲಿ ಪತ್ನಿ ಹೆಸರಲ್ಲಿ ದುಬಾರಿ ಬದಲಿ ನಿವೇಶನ ಪಡೆದ ಪ್ರಕರಣ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ FIR ದಾಖಲು ಮಾಡಲಾಗಿದೆ.. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ತನಿಖೆಗೆ ಆದೇಶ ಮಾಡಿದ್ದು, ಮೂರು ತಿಂಗಳ ಒಳಗೆ ವರದಿ ಕೊಡುವಂತೆ ಸೂಚನೆ ನೀಡಿತ್ತು. ಅದರಂತೆ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್‌ ಇಂದು ಎಫ್‌ಐಆರ್‌ ದಾಖಲು ಮಾಡಿದ್ದಾರೆ..

ಮುಡಾ ಪ್ರಕರಣ ಸಂಬಂಧ ಮೈಸೂರು ಲೋಕಾಯುಕ್ತ ಎಸ್‌ಪಿ ದಾಖಲು ಮಾಡಿರುವ ಎಫ್‌ಐಆರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು A1 ಆರೋಪಿ ಎಂದು ದಾಖಲು ಮಾಡಲಾಗಿದೆ.. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ A2 ಆರೋಪಿಯಾಗಿದ್ದಾರೆ..

ಇನ್ನು ಈ ಪ್ರಕರಣದಲ್ಲಿ ಪಾರ್ವತಿಯವರಿಗೆ ಭೂಮಿ ದಾನ ಕೊಟ್ಟ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ A3 ಹಾಗೂ ಮಲ್ಲಿಕಾರ್ಜುನ ಸ್ವಾಮಿಯವರಿಗೆ ಜಮೀನು ಮಾರಾಟ ಮಾಡಿದ ದೇವರಾಜು A4 ಆರೋಪಿಗಳಾಗಿದ್ದಾರೆ.. ಪಾರ್ವತಿಯವರಿಗೆ ಮೈಸೂರಿನ ವಿಜಯನಗರದಲ್ಲಿ 14 ಸೈಟುಗಳ ನೀಡೋದಕ್ಕೆ ಸಿದ್ದರಾಮಯ್ಯ ಅವರು ಪ್ರಭಾವ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು A1 ಆರೋಪಿ ಮಾಡಲಾಗಿದೆ..

ಇನ್ನು ಎಫ್‌ಐಆರ್‌ ಪ್ರತಿಯನ್ನು ದೂರುದಾರರಿಗೆ ಈಗ ನೀಡಲಾಗುತ್ತದೆ.. ಎಫ್‌ಐಆರ್‌ ದಾಖಲು ಮಾಡಿರುವುದರಿಂದ ಇನ್ನು ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಕರೆಯುತ್ತಾರೆ.. ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಆರೋಪಿಗಳೂ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.. ಅಗತ್ಯಬಿದ್ದರೆ ಬಂಧಿಸುವ ಸಾಧ್ಯತೆಯೂ ಇರುತ್ತದೆ..

 

Share Post