ಪುಣ್ಯಸ್ನಾನದ ವೇಳೆ 37 ಮಕ್ಕಳು ಸೇರಿ 43 ಮಂದಿ ನಾಪತ್ತೆ!
ಬಿಹಾರ; ಜೀವಿತ್ಪುತ್ರಿಕಾ ಹಬ್ಬದ ಪ್ರಯುಕ್ತ ನಡೆಯುವ ಪವಿತ್ರ ಪುಣ್ಯಸ್ನಾನದ ವೇಳೆ 37 ಮಕ್ಕಳು ಸೇರಿ 43 ಮಂದಿ ನಾಪತ್ತೆಯಾಗಿದ್ದಾರೆ.. ಇವರೆಲ್ಲರೂ ನೀರುಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.. ಬಿಹಾರದಲ್ಲಿ ಪ್ರಮುಖ ಹಬ್ಬಗಳಲ್ಲಿ ಜೀವಿತ್ಪುತ್ರಿಕಾ ಕೂಡಾ ಒಂದು.. ಕೊಳ ಅಥವಾ ನದಿಗಳಲ್ಲಿ ಪುಣ್ಯಸ್ನಾನ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.
ಬಿಹಾರದಲ್ಲಿ ಜೀವಿತ್ಪುತ್ರಿಕಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ.. ಮಕ್ಕಳ ಆರೋಗ್ಯ ಹಾಗೂ ಉತ್ತಮ ಬೆಳವಣಿಗೆಗಾಗಿ ತಾಯಂದಿರು ಉಪವಾಸ ಕೈಗೊಳ್ಳುತ್ತಾರೆ.. ನಂತರ ಮಕ್ಕಳ ಜೊತೆ ಹತ್ತಿರದ ನದಿ ಅಥವಾ ಕೊಳ್ಳದಲ್ಲಿ ಪುಣ್ಯಸ್ನಾನ ಮಾಡಲಾಗುತ್ತದೆ..
ಬಿಹಾರದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪುಣ್ಯಸ್ನಾನದ ವೇಳೆ ಈ ದುರ್ಘಟನೆಗಳು ನಡೆದಿದೆ.. ಪುಣ್ಯಸ್ನಾನ ಮಾಡುವ ವೇಳೆ ಮಕ್ಕಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಅವರ ರಕ್ಷಣೆಗಾಗಿ ಹೋದ ಕೆಲ ಮಹಿಳೆಯರು ಕೂಡಾ ನಾಪತ್ತೆಯಾಗಿದ್ದಾರೆ.. ಹಲವಾರು ಕಡೆ ಸಾವುನೋವು ಸಂಭವಿಸಿವೆ.. ಮೃತರ ಕುಟುಂಬಗಳಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ..