ಕಾರಿನಲ್ಲಿ ಒಂದೇ ಕುಟುಂಬದ 5 ಮಂದಿಯ ಮೃತ ದೇಹ ಪತ್ತೆ!
ಚೆನ್ನೈ; ಕಾರಿನಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ.. ಹೆದ್ದಾರಿ ಪಕ್ಕದಲ್ಲಿ ಕಾರು ನಿಂತಿತ್ತು.. ಅದರಲ್ಲಿ ಒಂದೇ ಕುಟುಂಬದ 5 ಮಂದಿಯ ಶವಗಳು ಸಿಕ್ಕಿವೆ.
ತಮಿಳುನಾಡಿನ ಪುದುಕೊಟ್ಟೈನಲ್ಲಿ ಈ ಘಟನೆ ನಡೆದಿದೆ.. ನಿನ್ನೆ ಬೆಳಗ್ಗೆಯಿಂದ ತಿರುಚ್ಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ನಿಂತಿತ್ತು. ಇವತ್ತು ಕೂಡಾ ಕಾರು ನಿಂತಲ್ಲೇ ಇತ್ತು.. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..
ಪೊಲೀಸರು ಬಂದು ಕಾರು ಪರಿಶೀಲನೆ ಮಾಡಿದಾಗ ಮೃತದೇಹಗಳು ಪತ್ತೆಯಾಗಿವೆ.. ಮೃತರು ತಮಿಳುನಾಡಿನ ಸೇಲಂ ನಿವಾಸಿಗಳು ಎಂದು ಗೊತ್ತಾಗಿದೆ.. ಉದ್ಯಮಿ ಮಣಿಕಂದನ್, ಪತ್ನಿ ನಿತ್ಯ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಮೃತರು ಎಂದು ಗುರುತಿಸಲಾಗಿದೆ.