BengaluruEconomy

ಗೃಹಲಕ್ಷ್ಮಿಯರಿಗೆ ಈ ತಿಂಗಳು 4 ಸಾವಿರ ರೂ. ಜಮೆಯಾಗುತ್ತೆ!

ಬೆಂಗಳೂರು; ಮನೆಯೊಡತಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ ಹಣ ಒಟ್ಟಿಗೆ ಹಾಕಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.. ಎರಡು ತಿಂಗಳ ಹಣ ಜಮೆ ಮಾಡುವುದು ಬಾಕಿ ಇದೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಎರಡು ತಿಂಗಳ ಹಣವನ್ನೂ ಒಟ್ಟಿಗೆ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತೇವೆ ಎಂದು ಹೇಳಿದ್ದಾರೆ..
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಗೃಹಲಕ್ಷ್ಮೀ ಯೋಜನೆ ನಿರಂತರವಾಗಿ ಮುಂದುವರೆಯುತ್ತದೆ.. ಕಳೆದ ಎರಡು ತಿಂಗಳ ಹಣ ಜಮೆ ಮಾಡುವುದು ಬಾಕಿ ಇದೆ.. ಎರಡೂ ತಿಂಗಳ ಹಣವನ್ನು ಈ ತಿಂಗಳಲ್ಲಿ ಒಟ್ಟಿಗೆ ಜಮೆ ಮಾಡುತ್ತಿದ್ದೇವೆ.. ಅದಕ್ಕಾಗಿ ಸಿದ್ಧತೆ ನಡೆದಿದೆ ಎಂದು ಹೇಳಿದ್ದಾರೆ. ಇನ್ನು ಗೃಹಲಕ್ಷ್ಮೀ ಯೋಜನೆಯಡಿ ಹಣ ಪಡೆಯಲು ಲಿಂಗತ್ವ ಅಲ್ಪಸಂಖ್ಯಾತರಿಗೆ 3 ತಿಂಗಳ ಹಿಂದಷ್ಟೇ ಅರ್ಜಿ ಹಾಕೋದಕ್ಕೆ ಅವಕಾಶ ಕೊಡಲಾಗಿತ್ತು.. ಈಗ ಅವರಿಗೂ ಕೂಡಾ ಒಟ್ಟಿಗೆ ಹಣವನ್ನು ಜಮೆ ಮಾಡಲಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.. ಇನ್ನು ಅಂಗನವಾಡಿಯಲ್ಲಿ ಅಕ್ಟೋಬರ್‌ 1 ರಿಂದಲೇ ಗಟ್ಟಿ ಬೆಲ್ಲ ನೀಡಲಾಗುವುದು ಎಂದು ಹೇಳಿದರು.

Share Post