ಬೈಕ್ ಸವಾರಿ ಮಾಡುವಾಗಲೇ ಪ್ರೇಮಿಗಳ ರೊಮ್ಯಾನ್ಸ್!
ನವದೆಹಲಿ; ಕೆಲ ಪ್ರೇಮಿಗಳು ತಾವು ಎಲ್ಲಿದ್ದೇನೆ ಎಂಬುದನ್ನೂ ಬಿಟ್ಟು ಮೈಮರೆತಿರುತ್ತಾರೆ.. ಹೋಗೋ ರಸ್ತೆಯಲ್ಲೇ ಅಸಹ್ಯವಾಗಿ ನಡೆದುಕೊಳ್ಳುತ್ತಿರುತ್ತಾರೆ.. ನೋಡಿದವರು ಏನಂದುಕೊಳ್ಳುತ್ತಾರೆ ಅನ್ನೋ ಪರಿಜ್ಞಾನ ಕೂಡಾ ಅವರಿಗೆ ಇರೋದಿಲ್ಲ.. ಅದೇ ರೀತಿ ದೆಹಲಿಯಲ್ಲಿ ಹೈವೇನಲ್ಲಿ ಹೋಗುತ್ತಿದ್ದ ಜೋಡಿಯೊಂದು ಬೈಕ್‌ನಲ್ಲೇ ರೊಮ್ಯಾನ್ಸ್ ಮಾಡಿದ್ದಾರೆ.. ಇದನ್ನು ಯಾರೋ ವಿಡಿಯೋ ಮಾಡಿದ್ದು, ಅದು ಸಾಕಷ್ಟು ವೈರಲ್ ಆಗುತ್ತಿದೆ..
ದೆಹಲಿಯ ವಿಕಾಸಪುರಿ ಫ್ಲೈಓವರ್‌ನಲ್ಲಿ ಯುವಕನೊಬ್ಬ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ.. ತನ್ನ ಪ್ರೇಯಸಿಯನ್ನು ಬೈಕ್‌ನಲ್ಲಿ ತನ್ನ ತೊಡೆಯ ಮೇಲೆ ವಿರುದ್ಧ ಡಿಕ್ಕಿನಲ್ಲಿ ಕೂರಿಸಿಕೊಂಡು ರೊಮ್ಯಾನ್ಸ್ ಮಾಡುತ್ತಾ ಬೈಕ್ ರೈಡ್ ಮಾಡಿದ್ದಾನೆ.. ಬೈಕ್ ಓಡುತ್ತಲೇ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ.. ಈ ಹುಚ್ಚಾಟವನ್ನು ಯಾರೋ ರೆಕಾರ್ಡ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ..
ಗಗನ್ ದೀಪ್ ಸಿಂಗ್ ಎಂಬುವವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.. ಸೆಪ್ಟೆಂಬರ್ 15ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು.. ಲಕ್ಷಾಂತರ ಜನ ಅದನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ದೆಹಲಿ ಪೊಈಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ..