ಶಾಸಕರ ಮನೆಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ!
ಲಕ್ನೋ; ಮನೆಗೆಲಸ ಮಾಡುವ ಅಪ್ರಾಪ್ತ ಬಾಲಕಿ ಶಾಸಕರೊಬ್ಬರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಮತ್ತೊಬ್ಬ ಬಾಲಕಾರ್ಮಿಕಳನ್ನು ರಕ್ಷಣೆ ಮಾಡಲಾಡಗಿದೆ.. ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಶಾಸಕರಲ್ಲಿ ಒಬ್ಬರಾದ ಭಾದೋಹಿಯಾ ಕ್ಷೇತ್ರದ ಶಾಸಕ ಜಾಹಿದ್ ಬೇಗ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ..
ಅಪ್ರಾಪ್ತರನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ.. ಆದ್ರೆ ಶಾಸಕನೇ ತನ್ನ ಮನೆಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ.. ಅದರಲ್ಲಿ ಒಬ್ಬ ಬಾಲಕಿ ನೇಣಿಗೆ ಶರಣಾಗಿದ್ದಾಳೆ.. ಹೀಗಾಗಿ ಶಾಸಕ ಜಾಹಿದ್ ಬೇಗ್ ವಿರುದ್ಧ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯುನಿಟ್ ಕೇಸ್ ದಾಖಲಿಸಿದೆ.. ಶೀಘ್ರದಲ್ಲೇ ಶಾಸಕ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.. ಘಟನೆಯ ತೀವ್ರತೆ ಗೊತ್ತಾಗುತ್ತಿದ್ದ ಶಾಸಕ ಹಾಗೂ ಅವರ ಪತ್ನಿ ಪರಾರಿಯಾಗಿದ್ದಾರೆ.. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..
ಭದೋಹಿ ನಗರದ ಶಾಸಕರ ನಿವಾಸದಲ್ಲಿ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.. ಮಾರನೇ ದಿನ ಅದೇ ಮನೆಯಲ್ಲಿ ಮತ್ತೊಬ್ಬ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.. ಹೀಗಾಗಿ ಶಾಸಕ ಹಾಗೂ ಅವರ ಪತ್ನಿ ವಿರುದ್ಧ ಎರಡನೇ ಎಫ್‌ಐಆರ್ ಕೂಡಾ ದಾಖಲಿಸಲಾಗಿದೆ.. ಸೆಕ್ಷನ್ 143 (4), 143 (5), ಸೆಕ್ಷನ್ 79 ಮತ್ತು ಸೆಕ್ಷನ್ 4 ಮತ್ತು 16 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.