ಕಂಪನಿ ಸಿಇಒ ಜೊತೆ ಒಪ್ಪಿತ ಸಂಬಂಧ; ಭಾರತ ಮೂಲದ ಮಹಿಳಾ ಉದ್ಯೋಗಿ ವಜಾ!
ನ್ಯೂಯಾರ್ಕ್ (ಅಮೆರಿಕ); ಕೆಲಸ ಮಾಡುವ ಕಂಪನಿಯಲ್ಲಿ ಕಂಪನಿಯ ಸಿಇಒ ಜೊತೆ ಒಪ್ಪಿತ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಭಾರತೀಯ ಮೂಲದ ವಕೀಲೆಯೊಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿದೆ.. ಅಮೆರಿಕದ ನಾರ್ಫೋಕ್ ಸದರ್ನ್ ಕಾರ್ಪೊರೇಷನ್ ಎಂಬ ಸಂಸ್ಥೆ ಈ ಕ್ರಮ ಕೈಗೊಂಡಿದೆ..
ಈ ಕಂಪನಿಯಲ್ಲಿ ಮುಖ್ಯ ಕಾನೂನು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನವನೀತಾ ನಾಗ್ ಎಂಬಾಕೆಯೇ ಕೆಲಸದಿಂದ ವಜಾಗೊಂಡವರು.. ಇವರು ಸಂಸ್ಥೆಯ ಸಿಇಒ ಆಗಿರುವ ಅಲನ್ ಶಾ ಅವರ ಜೊತೆ ಸಮ್ಮತದ ಸಂಬಂಧ ಹೊಂದಿದ್ದರು ಎನ್ನಲಾಗಿದೆ.. ಇದು ದೃಢವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.. ಇನ್ನು ಅಲನ್ ಶಾ ಅವರನ್ನೂ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಹೇಳಲಾಗಿದೆ..
ಇವರಿಬ್ಬರೂ ಕಂಪನಿಯ ನಿಯಮಗಳಿಗೆ ವಿರುದ್ಧವಾಗಿ ಸಂಬಂಧ ಹೊಂದಿದ್ದರು. ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಯಾವುದೇ ಉದ್ಯೋಗಿ ಮತ್ತೊಬ್ಬ ಉದ್ಯೋಗಿ ಜೊತೆ ವೈಯಕ್ತಿಕ, ಖಾಸಗಿ ಸಂಬಂಧ ಹೊಂದಿರುವಂತಿಲ್ಲ. ಹೀಗಾಗಿ ಇವರಿಬ್ಬರ ಸಂಬಂಧ ದೃಢಪಟ್ಟಿದ್ದರಿಂದ ಇಬ್ಬರನ್ನೂ ಕೆಲಸದಿಂದ ತೆಗೆಯಲಾಗಿದೆ..