ಪ್ರಧಾನಿ ಮೋದಿಗೆ ಭೂತಾನ್‌ನಿಂದ ಅತ್ಯುನ್ನತ ನಾಗರೀಕ ಗೌರವ
ಭೂತಾನ್: ಈ ವರ್ಷದ ಶ್ರೇಷ್ಟ ನಾಗರೀಕ ಗೌರವವನ್ನು ಪ್ರಧಾನಿ ನರೇಂದ್ರ ಮೋದಿಗೆ ಸಮರ್ಪಣೆ ಮಾಡಲಾಗುವುದೆಂದು ಭೂತಾನ್ ಸರ್ಕಾರ ಘೋಷಿಸಿದೆ. ಕೊರೊನಾದಂತಹ ಆಪತ್ಕಾಲದಲ್ಲಿ ಭಾರತ ನಮಗೆ ಸಹಾಯ ಹಸ್ತ ನೀಡಿದೆ. ಜೊತೆಗೆ ವ್ಯಾಪಾರ ವಹಿವಾಟಿನಲ್ಲೂ ನಮ್ಮ ಬೆನ್ನುಲುಬಾಗಿ ನಿಂತಿದೆ. ಇದರ ಗೌರವಾರ್ಥವಾಗಿ ಪ್ರಧಾನಿ ಮೋದಿಯವರಿಗೆ ಭೂತಾನ್‌ನ ಅತ್ಯುನ್ನತ ನಾಗರೀಕ ಗೌರವ, ನ್ಗಡಾಗ್ ಪೆಲ್‌ಗಿ ಖೋರ್ಲೋ ಪ್ರಶಸ್ಯಿಯನ್ನು ನೀಡುವುದಾಗಿ ಜಿಗ್ಮೆ ಖೇಸರ್ ನ್ಯಾಮ್ಗೆಲ್ ವಾಂಗ್‌ಚುಕ್ ಅವರು ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಭೂತಾನ್ ಪ್ರಧಾನಿ ಕಾರ್ಯಾಲಯವು ಈ ಗೌರವಕ್ಕೆ ಪ್ರಧಾನಿ ಮೋದಿಯವರು ʻಬಹಳ ಅರ್ಹʼ ಎಂದು ಬರೆದುಕೊಂಡಿದ್ದಾರೆ. ಮೋದಿಯವರು ಅದ್ಭುತ ವ್ಯಕ್ತಿ, ಈ ಗೌರವ ಸಮರ್ಪಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಅಭಿನಂದನೆ ಸಲ್ಲಿಸಿದೆ.