ಮಲ ಮಗಳನ್ನು ಮದುವೆಯಾಗಲು ಹೆಂಡತಿಗೆ ದಿನವೂ ವಿಷ ಕೊಡ್ತಿದ್ದ!
ವಾಷಿಂಗ್ಟನ್; ಆತ 71 ವರ್ಷದ ಮುದುಕ.. ಆದರೂ ಆತನಿಗೆ ಮಲ ಮಗಳ ಮೇಲೆ ಮೋಹ.. ಮಲ ಮಗಳನ್ನು ಮದುವೆಯಾಗೋದಕ್ಕಾಗಿ ಆತ ತನ್ನ ಪತ್ನಿಗೆ ಡ್ರಿಂಕ್ಸ್‌ನಲ್ಲಿ 12 ಬಾರಿ ವಿಷ ಹಾಕಿಕೊಟ್ಟಿದ್ದ.. ಪತ್ನಿ ಜೊತೆ ಸಲುಗೆಯಿಂದಲೇ ವರ್ತಿಸುತ್ತಿದ್ದ ಆರೋಪಿ, ಆಕೆ ಕುಡಿಯುವಾಗ ಆಕೆ ಮದ್ಯದ ಲೋಟದಲ್ಲಿ ಕೊಕೇನ್, ಎಂಡಿಎಂಎ ಮಾದಕ ವಸ್ತುಗಳನ್ನು ಸೇರಿಸುತ್ತಿದ್ದ.. ಇದರ ಜೊತೆಗೆ ವಿಷವನ್ನೂ ಬೆರೆಸುತ್ತಿದ್ದ ಎಂದು ತಿಳಿದುಬಂದಿದೆ.. ಆದ್ರೆ ಅದೃಷ್ಟವಶಾತ್ ಆ ಮಹಿಳೆ ಬದುಕಿದ್ದಾಳೆ.. ಗಂಡನ ಕಿತಾಪತಿ ಬಯಲು ಮಾಡಿದ್ದಾಳೆ.. ಈಗ ಜೈಲು ಸೇರಿರುವ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ..
71 ವರ್ಷ ಅಲ್ಫ್ರೆಡ್ ಡಬ್ಲೂ ರೂಫ್ ಎಂಬಾತನೇ ಈ ಕೃತ್ಯ ಎಸಗಿರುವಾತ.. ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ಈ ಘಟನೆ ನಡೆದಿದೆ.. ಆರೋಪಿ ಅಲ್ಫ್ರೆಡ್ ಡಬ್ಲೂ ರೂಫ್ 2021ರಲ್ಲಿ ತನ್ನ ಪತ್ನಿಯನ್ನು ಕೊಲ್ಲಲು ಮದ್ಯದಲ್ಲಿ 12 ಬಾರಿ ವಿಷ ಹಾಗೂ ಮಾದಕ ಪದಾರ್ಥ ಬೆರೆಸಿದ್ದನಂತೆ.. ಇದಕ್ಕೆ ಮಲಮಗಳೂ ಸಾತ್ ಕೊಟ್ಟಿದ್ದಳಂತೆ..! ತಾಯಿ ಸತ್ತರೆ ಮಲತಂದೆಯನ್ನು ಮದುವೆಯಾಗಬಹುದು. ತಾಯಿ ವಿಮೆ ಕೂಡಾ ನನಗೆ ಸಿಗುತ್ತದೆ ಎಂದು ಆಕೆ ಆಸೆಪಟ್ಟಿದ್ದಳಂತೆ..!
ಒಂದು ಮಹಿಳೆ ವಿಷವಿದ್ದ ಮದ್ಯ ಕುಡಿದು ಪ್ರಜ್ಞೆ ತಪ್ಪಿದ್ದಳು.. ಇದೇ ವೇಳೆ ಆಕೆ ಸತ್ತಿದ್ದಾಳೆಂದು ಆಕೆಯ ಮಗಳ ತನ್ನ ಮಲತಂದೆ ಜೊತೆ ಸೆಕ್ಸ್ ಕೂಡಾ ಮಾಡಿದ್ದಾಳೆ.. ಆದ್ರೆ ಕೆಲ ಹೊತ್ತಿನ ನಂತರ ಆಕೆಗೆ ಪ್ರಜ್ಞೆ ಬಂದಿದೆ.. ನಂತರ ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆ ಮಾಡಿಸಿದಾಗ ವಿಷ ಕುಡಿದಿರುವುದು ಗೊತ್ತಾಗಿದೆ.. ಕೂಡಲೇ ಆಕೆ ಗಂಡನ ವಿರುದ್ಧ ಕೇಸ್ ದಾಖಲು ಮಾಡಿದ್ದಳು.. ಇದೀಗ ಆರೋಪಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದು, ಆತನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ..